ತಮಿಳುನಾಡಿನಲ್ಲಿ ತಂದೆ-ಮಗನ ಲಾಕಪ್ ಡೆತ್: ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಉದ್ದೇಶಪೂರ್ವಕ ಅಳಿಸಲಾಗಿದೆ-ಮ್ಯಾಜಿಸ್ಟ್ರೇಟ್

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ತಂದೆ-ಮಗನ ಲಾಕಪ್ ಡೆತ್ ಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮುಚ್ಚಿ ಹಾಕಲು ಉದ್ದೇಶಪೂರ್ವಕವಾಗಿ ಪೊಲೀಸ್ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಲಾಗಿದೆ ಎಂದು  ಕೋವಿಲ್ಪಿಟ್ಟಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತಾವು  ಮದ್ರಾಸ್ ಹೈಕೋರ್ಟ್‌ನ ಮಧುರೈ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ತಂದೆ-ಮಗನ ಲಾಕಪ್ ಡೆತ್: ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಉದ್ದೇಶಪೂರ್ವಕ ಅಳಿಸಲಾಗಿದೆ-ಮ್ಯಾಜಿಸ್ಟ್ರೇಟ್

ಮಧುರೈ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ತಂದೆ-ಮಗನ ಲಾಕಪ್ ಡೆತ್ ಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮುಚ್ಚಿ ಹಾಕಲು ಉದ್ದೇಶಪೂರ್ವಕವಾಗಿ ಪೊಲೀಸ್ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಲಾಗಿದೆ ಎಂದು  ಕೋವಿಲ್ಪಿಟ್ಟಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತಾವು  ಮದ್ರಾಸ್ ಹೈಕೋರ್ಟ್‌ನ ಮಧುರೈ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಜೂನ್ 19 ರಂದು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಗಳನ್ನು ಮರೆಮಾಡಲು ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ವ್ಯಾಪಾರಿಗಳಾಗಿದ್ದ ಸಾಥನ್‌ಕುಲಂ ಜಯರಾಜ್ ಮತ್ತು ಅವನ ಮಗ ಬೆನಿಕ್ಸ್ ಅವರುಗಳ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ.

ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ, ಮ್ಯಾಜಿಸ್ಟ್ರೇಟ್, "ನ್ಯಾಯಾಲಯದ ಸೂಚನೆಯಂತೆ, ಜೂನ್ 28, 2020 ರಂದು ನಾನು ಸಾಥನ್‌ಕುಲಂ ಪೊಲೀಸ್ ಠಾಣೆಗೆ ಹೋಗಿ ಸಿಸಿಟಿವಿ ಕ್ಯಾಮೆರಾಗಳ ತುಣುಕನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದೆ. ಆದಾಗ್ಯೂ, ಕ್ಯಾಮೆರಾಗಳ ಹಾರ್ಡ್ ಡಿಸ್ಕ್ 1TB ಯಷ್ಟು ಶೇಖರಣಾ ಸ್ಥಳವನ್ನು ಹೊಂದಿದ್ದರೂ ಸಹ, ಅದರ ಸೆಟ್ಟಿಂಗ್‌ಗಳನ್ನು ಪ್ರೋಗ್ರಾಮ್ ಮಾಡಲಾಗಿದ್ದು, ಡೇಟಾ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತದೆ ಎಂದು ನಾನು ತಿಳಿದುಕೊಂಡೆ. ವಿಶೇಷವಾಗಿ, ಘಟನೆ ನಡೆದ ದಿನಾಂಕದ ವಿಡಿಯೋ ತುಣುಕುಗಳು ಕಣ್ಮರೆಯಾಗಿದೆ.. " ಅವರು ಹಾರ್ಡ್ ಡಿಸ್ಕ್ ಅನ್ನು ಸಾಕ್ಷಿಯಾಗಿ ವಶಪಡಿಸಿಕೊಂಡಿದ್ದಾರೆ.

ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ  ಮಹಿಳಾ ಕಾನ್‌ಸ್ಟೆಬಲ್ ಸತ್ಯವನ್ನು ಬಹಿರಂಗಪಡಿಸಲು 'ಭಯ’ ಪಡುತ್ತಿದ್ದಾರೆರೆ' ಎಂದು ನ್ಯಾಯಾಂಗ ಅಧಿಕಾರಿ ಹೇಳಿದ್ದಾರೆ. "ಹೆಚ್ಚಿನ ಸಹಕಾರ ನೀಡುವ ಭರವಸೆ  ನಂತರ, ಇಡೀ ರಾತ್ರಿ ಸಂತ್ರಸ್ಥರನ್ನು ಪೊಲೀಸರು ಪದೇ ಪದೇ ಥಳಿಸುತ್ತಿದ್ದರು. ಅಲ್ಲದೆ ಹಾಗೆ ಥಳಿಸುವಾಗ ಇಬ್ಬರ ಮೈನಲ್ಲಿ ರಕ್ತ ಸೋರುತ್ತಿದ್ದು ಆ ರಕ್ತ ಪೋಲೀಸ್ ಲಾಠಿಗಳಲ್ಲಿ ಸಹ ಕಾಣಿಸಿದೆ" ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ತನ್ನ ಹೇಳಿಕೆಯ ಮುದ್ರಿತ ನಕಲಿಗೆ ಸಹಿ ಮಾಡುವುದಾಗಿ  ಆಕೆ ಹೇಳಿದ್ದರೂ  ಇತರ ಪೊಲೀಸರು ಬೆದರಿಕೆ ಹಾಕಿದ್ದರಿಂದ  ಸಹಿ ಮಾಡಲು ಅವಳು ನಿರಾಕರಿಸಿದಳು ಆದರೆ ಅಂತಿಮವಾಗಿ ಅವಳ ರಕ್ಷಣೆಗೆ ಬದ್ದವೆಂದು ಭರವಸೆ ನೀಡಿದ ಮೇಲೆ ಸಹಿ ಮಾಡಿದ್ದಾಳೆ. "ಅವರ ಹೇಳಿಕೆಯನ್ನು ದಾಖಲಿಸುವಾಗಲೂ, ಪೊಲೀಸರು ನಿರಂತರವಾಗಿ ಇತರೆ ಅನಾವಶ್ಯಕ ಶಬ್ದಗಳನ್ನು ಮಾಡುವ ಮೂಲಕ ಕ ಗೊಂದಲವನ್ನು ಉಂಟುಮಾಡುತ್ತಿದ್ದರು, ಇದು ಮಹಿಳಾ ಕಾನ್ಸ್ಟೇಬಲ್ ಅನ್ನು ಇನ್ನಷ್ಟು ಭಯಕ್ಕೆ ದೂಡಿತ್ತು"

ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ, ವಿಶೇಷವಾಗಿ ಎಡಿಎಸ್ಪಿ ಡಿ ಕುಮಾರ್, ಡಿಎಸ್ಪಿ ಸಿ ಪ್ರತಾಪನ್ ಮತ್ತು ಕಾನ್ಸ್ಟೇಬಲ್ ಮಹಾರಾಜನ್ ತೋರಿಸಿದ ಪ್ರತಿಕೂಲ ವರ್ತನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ಮಾತನಾಡಿದರು, ನಂತರ ಅವರ ವಿರುದ್ಧ ಸುಮೋ ಮೋಟು ಕಂಟಪ್ಟ್  ಕ್ರಮಗಳನ್ನು ಪ್ರಾರಂಭಿಸಲು ನ್ಯಾಯಾಲಯ ಸೂಚಿಸಿದೆ.

ಮಹಾರಾಜನ್  ಕೇಳಿದ ಪ್ರಶ್ನೆಗಳಿಗೆ ವಿರೋಧಾತ್ಮಕ ಉತ್ತರಗಳನ್ನು ನೀಡುತ್ತಿದ್ದಾರೆ ಮತ್ತು ಅವರು ಸಾಕ್ಷ್ಯಗಳನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ.  ಮಹಾರಾಜನ್ ತಮಿಳಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು. ಮತ್ತೊಬ್ಬ ಪೊಲೀಸ್ ಗೆ ಕೂಡ ಅವರ ಲಾಠಿಯನ್ನು ಹಸ್ತಾಂತರಿಸುವಂತೆ ಕೇಳಲಾಯಿತು. ಆತ ತಕ್ಷಣ ಳದಿಂದ ಪರಾರಿಯಾಗಿದ್ದಾನೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು. ಈ ಎಲ್ಲಾ ಗೊಂದಲದಿಂದಾಗಿ ಮ್ಯಾಜಿಸ್ಟ್ರೇಟ್ ಠಾಣೆಯಿಂದ ಹೊರಹೋಗಬೇಕಾಯಿತು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com