ಅರ್ನಬ್ ಗೋಸ್ವಾಮಿ ವಿರುದ್ಧದ ಎಫ್ಐಆರ್ ಗಳಿಗೆ ಕೋರ್ಟ್ ತಡೆ

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ಗಳಿಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. 
ಪತ್ರಕರ್ತ ಅರ್ನಬ್ ಗೋಸ್ವಾಮಿ
ಪತ್ರಕರ್ತ ಅರ್ನಬ್ ಗೋಸ್ವಾಮಿ

ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ಗಳಿಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಪಾಲ್ಘರ್ ಗುಂಪು ಹಲ್ಲೆ ಹಾಗೂ ಬಾಂದ್ರಾ ಸ್ಟೇಷನ್ ನಲ್ಲಿ ವಲಸಿಗ ಕಾರ್ಮಿಕರ ಗುಂಪಿನ ಘಟನೆಗಳಿಗೆ ಕೋಮು ಬಣ್ಣ ನೀಡುವ ಆರೋಪವನ್ನು ಅರ್ನಬ್ ಗೋಸ್ವಾಮಿ ವಿರುದ್ಧ ಹೊರಿಸಲಾಗಿತ್ತು. 

ನ್ಯಾ.ಉಜ್ಜಲ್ ಭುಯಾನ್, ನ್ಯಾ.ರಿಯಾಜ್ ಚಗ್ಲಾ  ಮೇಲ್ನೋಟಕ್ಕೆ ಅರ್ನಬ್ ಗೋಸ್ವಾಮಿ ವಿರುದ್ಧ ಅಂತಹ ಆರೋಪದ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದೆ.  ಹಿರಿಯ ಅಡ್ವೊಕೇಟ್ ಗಳಾದ ಹರೀಶ್ ಸಾಳ್ವೆ ಹಾಗೂ ಮಿಲಿಂದ್ ಸಾಥೆ, ಗೋಸ್ವಾಮಿ ಪರ ವಾದ ಮಂಡಿಸಿ ತಮ್ಮ ಕಕ್ಷಿದಾರರ ವಿರುದ್ಧ ಹಾಕಲಾಗಿರುವ ಎಫ್ಐಆರ್ ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು.

ಪಾಲ್ಘರ್ ಗುಂಪು ಹತ್ಯೆ ಸಂಬಂಧ ರಿಪಬ್ಲಿಕ್ ಚಾನಲ್ ನಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮದ ವಿರುದ್ಧ ಎಫ್ಐಆರ್ ರದ್ದುಗೊಳಿಸುವುದಕ್ಕೆ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಆದರೆ ಒಂದಕ್ಕಿಂತ ಹೆಚ್ಚು ಎಫ್ಐಆರ್ ಗಳನ್ನ ದಾಖಲಿಸುವುದರಿಂದ ರಿಲೀಫ್ ನೀಡಿ, "ಈ ರೀತಿ ಮಾಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ" ಎಂದಿತ್ತು.

"ಮಾಧ್ಯಮ ಸಂಸ್ಥೆಯೊಂದು ಒಂದೇ ನಿಲುವು ತೆಗೆದುಕೊಳ್ಳುವಂತಿದ್ದರೆ ಮುಕ್ತ ಪ್ರಜಾಪ್ರಭುತ್ವ ಉಳಿಯುವುದಕ್ಕೆ ಸಾಧ್ಯವಿಲ್ಲ. ವಾಕ್ ಸ್ವಾತಂತ್ರ್ಯದ ಮೂಲ ಭೂತ ಹಕ್ಕುಗಳಲ್ಲಿ ಪತ್ರಕರ್ತರ ಸ್ವಾತಂತ್ರ್ಯವೂ ಅಡಕವಾಗಿದೆ. ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ ಇರುವವರೆಗೂ ಭಾರತದ ಸ್ವಾತಂತ್ರ್ಯ ಸುರಕ್ಷಿತವಾಗಿರಲಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com