ಮುಂಬೈ: ತಾಜ್ ಹೋಟೆಲ್ ಮೇಲೆ ಪಾಕಿಸ್ತಾನದಿಂದ ಬಾಂಬ್ ಬೆದರಿಕೆ ಕರೆ, ಬಿಗಿ ಭದ್ರತೆ

ವಾಣಿಜ್ಯ ನಗರಿ ಮುಂಬೈಯ ತಾಜ್ ಹೋಟೆಲ್ ಮೇಲೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸೋಮವಾರ ತಡರಾತ್ರಿ 12-30ರ ವೇಳೆಯಲ್ಲಿ  ಕರಾಚಿಯಿಂದ ಕರೆ ಬಂದಿರುವ ಬಗ್ಗೆ ಮಾಹಿತಿ ದೊರೆತಿದೆ.
ತಾಜ್ ಹೋಟೆಲ್
ತಾಜ್ ಹೋಟೆಲ್

ಮುಂಬೈ: ವಾಣಿಜ್ಯ ನಗರಿ ಮುಂಬೈಯ ತಾಜ್ ಹೋಟೆಲ್ ಮೇಲೆ ಬಾಂಬ್ ಬೆದರಿಕೆ ಕರೆ ಬಂದಿದೆ. ಸೋಮವಾರ ತಡರಾತ್ರಿ 12-30ರ ವೇಳೆಯಲ್ಲಿ  ಕರಾಚಿಯಿಂದ ಕರೆ ಬಂದಿರುವ ಬಗ್ಗೆ ಮಾಹಿತಿ ದೊರೆತಿದೆ.

ತಾಜ್ ಹೋಟೆಲ್ ಮತ್ತು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದಂತೆಯೇ ಹೋಟೆಲ್ 
ಹೊರಗಡೆ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

ಭದ್ರತಾ ಸಿಬ್ಬಂದಿ ಹೋಟೆಲ್ ಸುತ್ತಮುತ್ತ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಹೋಟೆಲ್ ಆವರಣವನ್ನು ಶೋಧಿಸಲಾಗುತ್ತಿದೆ.ಮುಂಜಾಗ್ರತಾ ಕ್ರಮವಾಗಿ ತಾಜ್ ಹೋಟೆಲ್ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಪಾಕಿಸ್ತಾನದಿಂದ ಕರೆ ಮಾಡಿರುವ ವ್ಯಕ್ತಿ ತನ್ನನ್ನು ಲಷ್ಕರ್ ಇ- ತೊಯ್ಹಾ ಸಂಘಟನೆಯ ಸದಸ್ಯ ಎಂದು ಪರಿಚಯಿಸಿಕೊಂಡಿದ್ದಾನೆ.
ಸೋಮವಾರ ತಡರಾತ್ರಿ 12-30ಕ್ಕೆ ಮೊದಲ ಕರೆ ಬಂದಿದ್ದು, 2008 ನವೆಂಬರ್ ನಲ್ಲಿ ನಡೆದಂತೆ ಲಷ್ಕರ್ -ಇ- ತೊಯ್ಬಾ ಉಗ್ರರಿಂದ ಹೋಟೆಲ್ ಮೇಲೆ ದಾಳಿ ನಡೆಸಲಾಗುವುದು ಎಂದು ಹೇಳಿದ್ದಾನೆ.

ಬಾಂದ್ರಾದಲ್ಲಿನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ಸಿಬ್ಬಂದಿ ಎರಡನೇ ಬಾರಿಗೆ ಕರೆ ಸ್ವೀಕರಿಸಿದಾಗ, ಎರಡು ಹೋಟೆಲ್ ಗಳಿಗೆ ಬಾಂಬ್ ಹಾಕಲಾಗುವುದು ಎಂದು ಬೆದರಿಸಿದ್ದಾನೆ. ಎರಡು ಕರೆಗಳು ಒಂದೇ ನಂಬರ್ ನಿಂದ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com