ಮಿಡತೆ ಹಾವಳಿ ನಿಯಂತ್ರಣಕ್ಕಾಗಿ ಹೆಲಿಕಾಪ್ಟರ್ ಸೇವೆಗಳಿಗೆ ಕೇಂದ್ರ ಸಚಿವ ತೋಮರ್ ಚಾಲನೆ

ವೈಮಾನಿಕವಾಗಿ ಕೀಟ ನಾಶಕ ಸಿಂಪಡಣೆ ಮೂಲಕ ಮಿಡತೆ ಹಾವಳಿ ನಿಯಂತ್ರಿಸಲು ಹೆಲಿಕಾಪ್ಟರ್ ಸೇವೆಗಳಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಚಾಲನೆ ನೀಡಿದ್ದಾರೆ.
ಮಿಡತೆ
ಮಿಡತೆ

ನವದೆಹಲಿ: ವೈಮಾನಿಕವಾಗಿ ಕೀಟ ನಾಶಕ ಸಿಂಪಡಣೆ ಮೂಲಕ ಮಿಡತೆ ಹಾವಳಿ ನಿಯಂತ್ರಿಸಲು ಹೆಲಿಕಾಪ್ಟರ್ ಸೇವೆಗಳಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಚಾಲನೆ ನೀಡಿದ್ದಾರೆ. 

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿರುವ ಹೆಲಿಪ್ಯಾಡ್ ಸೌಲಭ್ಯದಿಂದ ಸಿಂಪಡಣೆ ಉಪಕರಣಗಳೊಂದಿಗೆ ಬೆಲ್ ಹೆಲಿಕಾಪ್ಟರ್‍ ಗೆ ತೋಮರ್ ಚಾಲನೆ ನೀಡಿದರು.

ಬಾರ್ಮರ್‌ನ ಉತ್ತರ್ ಲೈ ನಲ್ಲಿರುವ ವಾಯುಪಡೆಯ ನಿಲ್ದಾಣಕ್ಕೆ ತೆರಳಿದ ಹೆಲಿಕಾಪ್ಟರ್ ಅಲ್ಲಿಂದ ಬಾರ್ಮರ್, ಜೈಸಲ್ಮೇರ್, ಬಿಕನೇರ್, ಜೋಧ್‌ಪುರ ಮತ್ತು ನಾಗೌರ್‌ನ ಮರುಭೂಮಿ ಪ್ರದೇಶಗಳಲ್ಲಿ ಮಿಡತೆ ನಿಯಂತ್ರಣ ಕಾರ್ಯಚಾರಣೆಯಲ್ಲಿ ತೊಡಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com