ವೈದ್ಯರ ನಿರ್ಲಕ್ಷ್ಯ: ಚಿಕಿತ್ಸೆ ಸಿಗದೆ ಬಲಿಯಾದ ಮಗು, ಎದೆಗಪ್ಪಿಕೊಂಡು ರೋಧಿಸಿದ ಪೋಷಕರು!

ಕುತ್ತಿಗೆ ಊತ ಹಾಗೂ ಅತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಕಣ್ಣೆದುರು ಆಡವಾಡಿಕೊಂಡು ಬೆಳೆಯಬೇಕಿದ್ದ ಮುದ್ದು ಮಗುವಿನ ಶವ ಕಂಡ ಪೋಷಕರು ಬಿಗಿದಪ್ಪಿಕೊಂಡು ರೋಧಿಸಿದ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. 
ಮಗುವನ್ನು ಎದೆಗಪ್ಪಿಕೊಂಡು ರೋಧಿಸುತ್ತಿರುವ ತಂದೆ
ಮಗುವನ್ನು ಎದೆಗಪ್ಪಿಕೊಂಡು ರೋಧಿಸುತ್ತಿರುವ ತಂದೆ

ಕನೌಜ್: ಕುತ್ತಿಗೆ ಊತ ಹಾಗೂ ಅತೀವ್ರ ಜ್ವರದಿಂದ ಬಳಲುತ್ತಿದ್ದ ಒಂದು ವರ್ಷದ ಮಗು ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಕಣ್ಣೆದುರು ಆಡವಾಡಿಕೊಂಡು ಬೆಳೆಯಬೇಕಿದ್ದ ಮುದ್ದು ಮಗುವಿನ ಶವ ಕಂಡ ಪೋಷಕರು ಬಿಗಿದಪ್ಪಿಕೊಂಡು ರೋಧಿಸಿದ ಮನಕಲಕುವ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. 

ಸಾವನ್ನಪ್ಪಿದ ಮಗುವನ್ನು ಪೋಷಕರು ಕಂಕುಳಲ್ಲೇ ಎತ್ತಿಕೊಂಡು ಯಾತನೆ ಪಡುತ್ತಿರುವ ದಂಪತಿಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವೈದ್ಯರ ನಿರ್ಲಕ್ಷಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ವಿಡಿಯೋ ಕಂಡ ಜನರು ಮಗು ಕಳೆದುಕೊಂಡ ಪೋಷಕರ ಕರುಣಾಜನಕ ಸ್ಥಿತಿಗೆ ವ್ಯಥೆಪಟ್ಟಿದ್ದಾರೆ. 

ಕನೌಜ್ ಜಿಲ್ಲೆಯ ಮಿಶ್ರಿಪುರ್ ಗ್ರಾಮದ ಪ್ರೇಮ್ ಚಂದ್ ಎಂಬ ವ್ಯಕ್ತಿಯ 1 ವರ್ಷದ ಗಂಡು ಮಗು ಅತೀವ್ರ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. 

ಆಸ್ಪತ್ರೆಗೆ ಕರೆತಂದು 45 ನಿಮಿಷವಾದರೂ, ಯಾವೊಬ್ಬ ವೈದ್ಯರೂ ಕೂಡ ಮಗುವನ್ನು ಪರಿಶೀಲಿಸಲಿಲ್ಲ ಬಳಿಕ ಬಂದ ವೈದ್ಯರೊಬ್ಬರು ಕಾನ್ಪುರಕ್ಕೆ ಕರೆದೊಯ್ಯುವಂತೆ ತಿಳಿಸಿದರು. ನನ್ನ ಬಳಿ ಹಣವಿರಲಿಲ್ಲ. ನಾನೇನು ಮಾಡಬೇಕಿತ್ತು..? ಎಂದು ಪ್ರೇಮ್ ಚಂದ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. 

ಈ ನಡುವೆ ಪೋಷಕರ ಈ ಆರೋಪವನ್ನು ಕನೌಜ್ ವೈದ್ಯಕೀಯ ಕಚೇರಿಯ ಮುಖ್ಯಸ್ಥ ಡಾ.ಕೃಷ್ಣ ಸ್ವರೂಪ್ ಅವರು ನಿರಾಕರಿಸಿದ್ದಾರೆ. 

ಮಿಶ್ರಿಪುರ್ ಗ್ರಾಮದ ನಿವಾಸಿ ಪ್ರೇಮ್ ಚಂದ್ ಎಂಬ ವ್ಯಕ್ತಿ ತನ್ನ ಪುತ್ರ ಅನುಜ್ ಎಂಬ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂಡಲೇ ತಜ್ಞ ವೈದ್ಯರು ತಪಾಸಣೆ ನಡೆಸಿದ್ದಾರೆ. ಆದರೆ, ಮಗು ಅರ್ಧಗಂಟೆಯಲ್ಲಿ ಸಾವನ್ನಪ್ಪಿದೆ. ಆಸ್ಪತ್ರೆ ಮಗುವನ್ನು ದಾಖಲಿಸಿಕೊಳ್ಳಲಿಲ್ಲ, ವೈದ್ಯರು ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪ ಸರಿಯಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com