ಗಲ್ವಾನ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಸೇನೆಗೆ ಬೇಕಿದೆ ವಾಟರ್ ಪ್ರೂಫ್ ಸಮವಸ್ತ್ರ!

ಭಾರತ-ಚೀನೀ ಸೈನಿಕರ ಸಂಘರ್ಷ ಮತ್ತು ಸಾವಿಗೆ ವೇದಿಕೆಯಾಗಿದ್ದ ಗಲ್ವಾನ್ ಕಣಿವೆಯಲ್ಲಿ ಇದೀಗ ಭಾರತೀಯ ಯೋಧರಿಗೆ ಹೊಸ ಸಮಸ್ಯೆ ಎದುರಾಗಿದ್ದು, ಗಲ್ವಾನ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕರ್ತವ್ಯ ಪಾಲನೆಗೆ ಸೈನಿಕರಿಗೆ ವಾಟರ್ ಪ್ರೂಫ್ ಸಮವಸ್ತ್ರ ಅನಿವಾರ್ಯತೆ ಎದುರಾಗಿದೆ.

Published: 30th June 2020 04:09 PM  |   Last Updated: 30th June 2020 04:09 PM   |  A+A-


Galwan-Indian Army

ಗಲ್ವಾನ್ ಕಣಿವೆಯಲ್ಲಿ ಸೈನಿಕರ ಕರ್ತವ್ಯ ನಿಯೋಜನೆ

Posted By : srinivasamurthy
Source : ANI

ನವದೆಹಲಿ: ಭಾರತ-ಚೀನೀ ಸೈನಿಕರ ಸಂಘರ್ಷ ಮತ್ತು ಸಾವಿಗೆ ವೇದಿಕೆಯಾಗಿದ್ದ ಗಲ್ವಾನ್ ಕಣಿವೆಯಲ್ಲಿ ಇದೀಗ ಭಾರತೀಯ ಯೋಧರಿಗೆ ಹೊಸ ಸಮಸ್ಯೆ ಎದುರಾಗಿದ್ದು, ಗಲ್ವಾನ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕರ್ತವ್ಯ ಪಾಲನೆಗೆ ಸೈನಿಕರಿಗೆ ವಾಟರ್ ಪ್ರೂಫ್ ಸಮವಸ್ತ್ರ ಅನಿವಾರ್ಯತೆ ಎದುರಾಗಿದೆ.

ಹೌದು.. ಗಲ್ವಾನ್ ಕಣಿವೆಯಲ್ಲಿ ಇದೀಗ ನೀರಿನ ಹರಿವು ಹೆಚ್ಚಾಗಿದ್ದು, ಇದರಿಂದಾಗಿ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಸೈನಿಕರಿಗೆ ಹೊಸ ಸಮಸ್ಯೆ ಎದುರಾಗಿದೆ. ಸೈನಿಕರ ಬಳಿ ವಾಟರ್ ಪ್ರೂಫ್ ಸಮವಸ್ತ್ರಗಳಿಲ್ಲದೇ ಇರುವುದರಿಂದ ನೀರಿನಲ್ಲಿ ಅವು ಒದ್ದೆಯಾದರೆ ಸೈನಿಕರಿಗೆ ಅನಾರೋಗ್ಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಸೈನಿಕರಿಗೆ ವಾಟರ್ ಪ್ರೂಫ್ ಸಮವಸ್ತ್ರಗಳನ್ನು ವಿತರಿಸಬೇಕು ಎಂದು ಮನವಿ ಮಾಡಲಾಗಿದೆ.

ಅದರೆ ಅತ್ತ ಚೀನಾ ಸೇನೆ ಮಾತ್ರ ಇದಕ್ಕೆ ಸಂಪೂರ್ಣವಾಗಿ ಸಜ್ಜಾಗಿರುವಂತೆ ಕಂಡುಬಂದಿದ್ದು, ಗಲ್ವಾನ್ ಸಂಘರ್ಷದ ಬಳಿಕ ಚೀನಾ ಸೈನಿಕರಿಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಎಲ್ಲ ಚೀನಾ ಸೈನಿಕರು ವಾಟರ್ ಪ್ರೂಫ್ ಸಮವಸ್ತ್ರಗಳ ಸಹಿತ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗಲ್ವಾನ್ ನದಿ ಹಿಮನದಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೆ ಗಲ್ವಾನ್ ಕಣಿನೆಯಲ್ಲಿ ಉಷ್ಣಾಂಶ ಕೂಡ ಕುಸಿಯುತ್ತಿದ್ದು, ಇಲ್ಲಿ ಕೆಲಸ ನಿರ್ವಹಿಸಲು ಸೈನಿಕರಿಗೆ ವಿಶೇಷ ರೀತಿಯ ಸಮವಸ್ತ್ರಗಳ ಅವಶ್ಯಕತೆ ಇದೆ. ಆದರೆ ಅತ್ತ ಚೀನಾ ಸೈನಿಕರೂ ಈ ಎಲ್ಲ ನೈಸರ್ಗಿಕ ಬದಲಾವಣೆಗೆ ಸಿದ್ಧರಾಗಿಯೇ ಬಂದಿದ್ದಾರೆ. ಅವರನ್ನು ಎದುರಿಸಲು ನಮಗೂ ಸಹ ಸೂಕ್ತ ಮೂಲ ಸೌಕರ್ಯಗಳು ಮತ್ತು ಸೂಕ್ತ ವಿಶೇಷ ವಾಟರ್ ಪ್ರೂಫ್ ಸಮವಸ್ತ್ರಗಳು ಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಭಾರತೀಯ ಸೈನಿಕರು ಗಸ್ತು ತಿರುಗುತ್ತಿದ್ದ Indian PP-14 (Indian Patrolling Point 14)ನಲ್ಲಿ ಇದೀಗ ಚೀನಾ ಸೇನೆ ದೊಡ್ಡ ದೊಡ್ಡ ಟೆಂಟ್ ಗಳನ್ನು ನಿರ್ಮಿಸಿಕೊಂಡಿದ್ದು ಮಾತ್ರವಲ್ಲದೇ, ನಿರ್ಮಾಣ ಕಾಮಗಾರಿಗಳನ್ನೂ ಕೈಗೆತ್ತಿಕೊಂಡಿದೆ. ಆ ಮೂಲಕ ವಿವಾದಿತ ಜಾಗವನ್ನು ತನ್ನದೇ ಎಂದು ಚೀನಾ ಬಿಂಬಿಸತೊಡಗಿದೆ. ಅಲ್ಲದೆ ಈ ಜಾಗದಲ್ಲಿ ಭಾರತೀಯ ಸೈನಿಕರು ಗಸ್ತು ತಿರುಗದಂತೆ ಮಾಡಿದೆ. ಇದೇ ಕಾರಣಕ್ಕೆ ಇಲ್ಲಿ ಸೈನಿಕರ ನಿಯೋಜನೆ ಅನಿವಾರ್ಯವಾಗಿದ್ದು, ನಿಯೋಜನೆ ಮಾತ್ರವಲ್ಲದೇ ಸೈನಿಕರಿಗೆ ಅಗತ್ಯ ಸಮವಸ್ತ್ರಗಳ್ನೂ ನೀಡಬೇಕಿದೆ. 

ಈ ಹಿಂದೆ ಸೇನಾ ಮುಖ್ಯಸ್ಥರ ಸಭೆಯಲ್ಲಿ ಚೀನಾ ಸೈನಿಕರನ್ನು ಹಿಂತೆಗೆಯುವ ಕುರಿತು ಭರವಸೆ ನೀಡಿತ್ತಾದರೂ ವಿವಾದಿತ ಸ್ಥಳದಲ್ಲಿ ಭಾರಿ ಪ್ರಮಾಣದ ಸೈನಿಕರನ್ನು ನಿಯೋಜನೆ ಮಾಡುತ್ತಿದೆ. ಅಂತೆಯೇ ಭಾರತ ಸರ್ಕಾರ ಕೂಡ ಎಲ್ಎಸಿ ಉದ್ದಕ್ಕೂ ಭಾರಿ ಪ್ರಮಾಣದ ಸೈನಿಕರನ್ನು ನಿಯೋಜಿಸಿದೆ. 

Stay up to date on all the latest ರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp