ನಿಷೇಧದ ಬಿಸಿ ತಟ್ಟುತ್ತಿದ್ದಂತೆಯೇ ಟಿಕ್ ಟಾಕ್ ಹೇಳಿದ್ದಿಷ್ಟು...

ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಗಳನ್ನು ಜೂ.29 ರ ರಾತ್ರಿ ನಿಷೇಧಿಸಿದ್ದು, ಜೂ.30 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಿಂದ ಎಲ್ಲವೂ ಕಣ್ಮರೆಯಾಗಿವೆ. 
ಟಿಕ್ ಟಾಕ್
ಟಿಕ್ ಟಾಕ್

ನವದೆಹಲಿ: ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ ಗಳನ್ನು ಜೂ.29 ರ ರಾತ್ರಿ ನಿಷೇಧಿಸಿದ್ದು, ಜೂ.30 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ಗಳಿಂದ ಎಲ್ಲವೂ ಕಣ್ಮರೆಯಾಗಿವೆ. ನಿಷೇಧದ ಬಿಸಿ ತಟ್ಟುತ್ತಿದ್ದಂತೆಯೇ ಟಿಕ್ ಟಾಕ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಆದೇಶವನ್ನು ಅನುಸರಿಸುತ್ತಿರುವುದಾಗಿ ಹೇಳಿದೆ. 

ಭಾರತ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಆಪ್ ಗಳನ್ನು ನಿಷೇಧಿಸಲು ಆದೇಶಿಸಿದೆ, ಈ ಆದೇಶವನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಟಿಕ್ ಟಾಕ್ ಇಂಡಿಯಾದ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ. ಭಾರತ ಸರ್ಕಾರ ನಿಷೇಧಕ್ಕೆ ಸಂಬಂಧಪಟ್ಟವರನ್ನು ಆಹ್ವಾನಿಸಿದ್ದು, ನಿಷೇಧದ ಆದೇಶಕ್ಕೆ ಪ್ರತಿಕ್ರಿಯೆ ನೀಡಲು ಹಾಗೂ ಸಂಸ್ಥೆಗಳಿಂದ ಸ್ಪಷ್ಟೀಕರಣ ನೀಡುವುದಕ್ಕೆ ಅವಕಾಶ ನೀಡಿದೆ. 

"ಟಿಕ್ ಟಾಕ್ ಭಾರತದ ಗ್ರಾಹಕರ ಡಾಟಾವನ್ನು ಚೀನಾ ಸರ್ಕಾರವೂ ಸೇರಿದಂತೆ ಯಾವುದೇ ವಿದೇಶಿ ಸರ್ಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ, ಭಾರತದ ಕಾನೂನಿಗೆ ಅನುಗುಣವಾಗಿ ಎಲ್ಲಾ ಡಾಟಾ ಪ್ರೈವಸಿ ಹಾಗೂ ಭದ್ರತಾ ಅಗತ್ಯತೆಗಳನ್ನು ಟಿಕ್ ಟಾಕ್ ಅನುಸರಿಸುತ್ತಿದೆ ಎಂದು ನಿಖಿಲ್ ಗಾಂಧಿ ತಿಳಿಸಿದ್ದಾರೆ.

ಭಾರತದ ಗ್ರಾಹಕರ ಡಾಟಾಗಳ ಕುರಿತು ಚೀನಾ ಆಪ್ ಗಳ ಮೂಲಕ ಚೀನಾ ಸರ್ಕಾರಕ್ಕೆ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ದೂರುಗಳು ಬಂದಿದ್ದವು. ಈ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಗಲ್ವಾನ್ ಕಣಿವೆಯಲ್ಲಿ ಸೇನಾ ಸಿಬ್ಬಂದಿಗಳ ನಡುವೆ ಘರ್ಷಣೆಯುಂಟಾಗಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆಗಳ ನಂತರ ಭಾರತ ಚೀನಾ ಆಪ್ ಗಳನ್ನು ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com