ಎನ್ ಪಿಆರ್ ಜಾರಿಗೆ ತರುವುದಿಲ್ಲ ಎಂದು ರಾಜ್ಯ ಸರ್ಕಾರಗಳು ಒಂದಾಗಿ ನಿರ್ಧಾರ ತೆಗೆದುಕೊಳ್ಳಬೇಕು: ಮನೀಶ್ ತಿವಾರಿ 

ರಾಜ್ಯ ಸರ್ಕಾರಗಳು ಒಟ್ಟಾಗಿ ನಿಂತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ನ್ನು ಜಾರಿಗೆ ತರುವುದಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.
ಮನೀಶ್ ತಿವಾರಿ
ಮನೀಶ್ ತಿವಾರಿ

ನವದೆಹಲಿ: ರಾಜ್ಯ ಸರ್ಕಾರಗಳು ಒಟ್ಟಾಗಿ ನಿಂತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ನ್ನು ಜಾರಿಗೆ ತರುವುದಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.


ಸಿಎಎ, ಎನ್ ಪಿಆರ್, ಎನ್ ಆರ್ ಸಿಗಳು ದೇಶದ ಮೂಲ ಗುಣವನ್ನು ಬೇರ್ಪಡಿಸುತ್ತವೆ. ಇದು ಸಮಾಜವನ್ನು ಒಟ್ಟು ಮಾಡುವುದರ ಬದಲಿಗೆ ಧ್ರುವೀಕರಣ ಮಾಡುತ್ತದೆ. ಅನ್ಯೀಕರಣ, ಆಮೂಲಾಗ್ರೀಕರಣ ಮತ್ತು ಉಗ್ರವಾದವೆಂಬ ಮೂರು ಸಮಾಜದ ಧ್ರುವೀಕರಣವನ್ನು ಇದು ಹೊಂದಿದೆ. ಇದರಿಂದ ದೇಶಕ್ಕೆ ವಿನಾಶವೇ ಹೊರತು ಪ್ರಯೋಜನವೇನೂ ಇಲ್ಲ ಎಂದು ತಿವಾರಿ ಟ್ವೀಟ್ ನಲ್ಲಿ ಹೇಳಿದ್ದಾರೆ. 


ಸಿಎಎಯಿಂದ ಏನು ಪರಿಣಾಮವೆಂದು ಈಗಾಗಲೇ ದೆಹಲಿಯಲ್ಲಿ ಎಲ್ಲರೂ ನೋಡಿದ್ದಾರೆ. ಹಲವು ಮುಗ್ಧ ನಾಗರಿಕರು ಮೃತಪಟ್ಟಿದ್ದಾರೆ. ದೇಶ ಅಧಃಪಥನದತ್ತ ಹೋಗುವುದನ್ನು ಸರ್ಕಾರ ನೋಡಿಕೊಂಡು ಕೂಡಲೇ ಹಿಂತೆಗೆದುಕೊಳ್ಳಬೇಕು. ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ನಿಂತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಜಾರಿಗೆ ತರುವುದಿಲ್ಲ ಎಂಬ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com