ಬೆಂಕಿಯಿಂದ ನಾಯಿಯನ್ನು ರಕ್ಷಿಸಲು ಹೋಗಿ ತಾನೇ ಬಲಿಯಾದ ಸೇನಾ ಅಧಿಕಾರಿ!

ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದ ಬಾರಮುಲ್ಲಾ ಡಿಲ್ಲೆಯ ಗುಲ್ನಾರ್ಗ್ ಪ್ರದೇಶದಲ್ಲಿ ಗುಂಡಿನ ದಾಳಿಯ ವೇಳೆಯಲ್ಲಿ ನಾಯಿಯನ್ನು ರಕ್ಷಿಸಲು ಹೋಗಿ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು- ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದ ಬಾರಮುಲ್ಲಾ ಡಿಲ್ಲೆಯ ಗುಲ್ನಾರ್ಗ್ ಪ್ರದೇಶದಲ್ಲಿ ಗುಂಡಿನ ದಾಳಿಯ ವೇಳೆಯಲ್ಲಿ ನಾಯಿಯನ್ನು ರಕ್ಷಿಸಲು ಹೋಗಿ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಗುಲ್ಮಾರ್ಗ್ ನ ಎಸ್ ಎಸ್ ಟಿಸಿ ಗೆ ಹೊಂದಿಕೊಂಡಂತಿರುವ ಅಧಿಕಾರಿಯ ಟೆಂಟ್ ಗೆ ಕಳೆದ ರಾತ್ರಿ  ಬಳಿ ಕಳೆದ ರಾತ್ರಿ ಬೆಂಕಿ ಹೊತ್ತಿಕೊಂಡಿದೆ.  ಈ ವೇಳೆ ತನ್ನ ಪತ್ನಿ ಹಾಗೂ ನಾಯಿಯೊಂದನ್ನು ಮೇಜರ್ ಅಂಕಿತ್ ಬುದ್ ರಾಜ್ ರಕ್ಷಿಸಿದ್ದಾರೆ. 

ಆದಾಗ್ಯೂ, ಮತ್ತೊಂದು ನಾಯಿಯನ್ನು ರಕ್ಷಿಸಲು ಪ್ರಯತ್ನಿಸುವಾಗ ಬೆಂಕಿಯಿಂದಾಗಿ  ಶೇ. 90 ರಷ್ಟು ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಸೇನಾ ಅಧಿಕಾರಿಯ ಮೃತದೇಹವನ್ನು ತಂಗಮಾರ್ಗದ ಉಪ ನಗರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com