ಅಜ್ಮೀರ್ ದರ್ಗಾಗೆ ಸೋನಿಯಾ ಗಾಂಧಿ ಪರವಾಗಿ ಗೆಹ್ಲೋಟ್ ‘ಚಾದರ್’ ಅರ್ಪಣೆ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ದರ್ಗಾದಲ್ಲಿ ‘ಚಾದರ್’ ಅರ್ಪಿಸಿದರು.
ಚಾದರ್
ಚಾದರ್

ಅಜ್ಮೀರ್: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪರವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ದರ್ಗಾದಲ್ಲಿ ‘ಚಾದರ್’ ಅರ್ಪಿಸಿದರು.

ಅಶೋಕ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಪಕ್ಷದ ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಮತ್ತು ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನದೀಮ್ ಜಾವೇದ್ ಅವರು 11ನೇ ಶತಮಾನದ ಸೂಫಿ ಸಂತರ ದರ್ಗಾಕ್ಕೆ ಭೇಟಿ ನೀಡಿದರು.

ನದೀಮ್ ಅವರು ದರ್ಗಾ ಷರೀಫ್ ಹೊರಗೆ ಸೋನಿಯಾ ಗಾಂಧಿಯವರ ಸಂದೇಶವನ್ನು ಓದಿದರು. ‘ಖ್ವಾಜಾ ದರ್ಗಾದಲ್ಲಿ ಚಾದರ್ ಅರ್ಪಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಸೋನಿಯಾಗಾಂಧಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಗಂಗಾ-ಜಮುನಿ ತೆಹ್ಜೀಬ್ ( ಹಿಂದೂ-ಮುಸ್ಲಿಂ ಸಂಸ್ಕೃತಿಯ ವಿಶಿಷ್ಟವಾದ, ನುಡಿಗಟ್ಟು) ಮತ್ತು ಕೋಮು ಸೌಹಾರ್ದತೆಗೆ ಖ್ವಾಜಾ ಸಾಹೇಬ್ ಅವರ ದರ್ಗಾ ಹೆಸರುವಾಸಿಯಾಗಿದೆ.

ದೇಶದಲ್ಲಿ ಶಾಂತಿ, ಸೋದರತ್ವ, ಕೋಮು ಸೌಹಾರ್ದತೆಗೆ ಪ್ರಾರ್ಥಿಸಿದ್ದಾರೆ. ಎಲ್ಲರ ಒಗ್ಗಟ್ಟಿನಿಂದ ದ್ವೇಷ, ವೈಷಮ್ಯವನ್ನು ಸೋಲಿಸಬಹುದಾಗಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ.ರಘು ಶರ್ಮಾ ಮತ್ತು ಕಾಂಗ್ರೆಸ್ ಮುಖಂಡರಾದ ಅಶ್ಕ್ ಅಲಿ ತಂಕ್ ಮತ್ತು ಅಬಿದ್ ಕಾಗ್ಜಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com