ಈಶಾನ್ಯ ದೆಹಲಿ: ಚರಂಡಿಯಲ್ಲಿ 4 ಮೃತ ದೇಹಗಳು ಪತ್ತೆ! 

ಈಶಾನ್ಯ ದೆಹಲಿಯ ಚರಂಡಿಗಳಲ್ಲಿ 4 ಮೃತ ದೇಹಗಳು ಪತ್ತೆಯಾಗಿವೆ. ಈಶಾನ್ಯ ದೆಹಲಿಯ ಚರಂಡಿಗಳಲ್ಲಿ 4 ಮೃತ ದೇಹಗಳು ಪತ್ತೆಯಾಗಿವೆ. 

Published: 01st March 2020 10:26 PM  |   Last Updated: 01st March 2020 10:26 PM   |  A+A-


Four Bodies Recovered From Drains In Northeast Delhi

ಈಶಾನ್ಯ ದೆಹಲಿ: ಚರಂಡಿಯಲ್ಲಿ 4 ಮೃತ ದೇಹಗಳು ಪತ್ತೆ!

Posted By : Srinivas Rao BV
Source : Online Desk

ದೆಹಲಿ: ಈಶಾನ್ಯ ದೆಹಲಿಯ ಚರಂಡಿಗಳಲ್ಲಿ 4 ಮೃತ ದೇಹಗಳು ಪತ್ತೆಯಾಗಿವೆ. 

ಆದರೆ ಈ ಮೃತ ದೇಹಗಳು ಈಶಾನ್ಯ ದೆಹಲಿಯಲ್ಲಿನ ಗಲಭೆಗೆ ಸಂಬಂಧಪಟ್ಟಿದ್ದೋ ಅಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಅಧಿಕಾರಿಗಳು ಗಲಭೆ ಸಾವು-ನೋವಿಗೆ ಸಂಬಂಧಿಸಿದ ಪರಿಷ್ಕೃತ ಅಂಕಿ-ಅಂಶಗಳನ್ನು ಪ್ರಕಟಿಸಿಲ್ಲ. 

ಬೆಳಿಗ್ಗೆ ವೇಳೆಗೆ ಪೊಲೀಸ್ ಪಿಸಿಆರ್ ಗೆ ಭಗೀರತ್ ನಗರದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿರುವುದರ ಬಗ್ಗೆ ಕರೆ ಬಂದಿತ್ತು. ಮಧ್ಯಾಹ್ನದ ವೇಳೆಗೆ ಎರಡನೇ ಮೃತದೇಹ ಅದೇ ಚರಂಡಿಯಲ್ಲಿ ಪತ್ತೆಯಾಗಿತ್ತು. ಮೂರನೇ ಮೃತ ದೇಹ ಗೋಕುಲ್ ಪುರಿ ಪೊಲೀಸ್ ಠಾಣೆ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದ್ದರೆ ನಾಲ್ಕನೆ ಮೃತದೇಹ ಶಿವ್ ವಿಹಾರ್ ಬಳಿ ಇರುವ ಚರಂಡಿಯಲ್ಲಿ ಪತ್ತೆಯಾಗಿದೆ.  ಪತ್ತೆಯಾಗಿರುವ ಮೃತದೇಹಗಳ ಗುರುತು ಇನ್ನೂ ತಿಳಿದುಬಂದಿಲ್ಲ. 

Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp