ತಿರುಚಿದ ಫೋಟೋ ನೋಡಿ ಖುಷ್ ಆದ ಇವಾಂಕಾ ಟ್ರಂಪ್

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಿರುಚಿದ ಫೋಟೋ ನೋಡಿದ ಕೂಡಲೇ ಖ್ಯಾತನಾಮರು ಸಿಟ್ಟಾಗುವುದು ಸಾಮಾನ್ಯ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಮಾತ್ರ ಫುಲ್ ಖುಷ್ ಆಗಿದ್ದಾರೆ. 
ತಿರುಚಿದ ಫೋಟೋ ನೋಡಿ ಖುಷ್ ಆದ ಇವಾಂಕಾ ಟ್ರಂಪ್
ತಿರುಚಿದ ಫೋಟೋ ನೋಡಿ ಖುಷ್ ಆದ ಇವಾಂಕಾ ಟ್ರಂಪ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಿರುಚಿದ ಫೋಟೋ ನೋಡಿದ ಕೂಡಲೇ ಖ್ಯಾತನಾಮರು ಸಿಟ್ಟಾಗುವುದು ಸಾಮಾನ್ಯ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಮಾತ್ರ ಫುಲ್ ಖುಷ್ ಆಗಿದ್ದಾರೆ. 

ಕಾರಣ, ತಾಜ್ ಮಹಲ್ ಎದುರಲ್ಲಿ ತಾವು ಇತ್ತೀಚೆಗೆ ತೆಗೆಸಿಕೊಂಡ ಫೋಟೋವನ್ನು ಭಾರತೀಯರು ಫೋಟೋ ಶಾಪ್ ಮೂಲಕ ತಿರುಚಿ ತಮ್ಮ ತಮ್ಮ ಪೋಟೋ ಸೇರಿಸಿಕೊಂಡಿರುವುದನ್ನು ಇವಾಂಕಾ ಬಹುವಾಗಿ ಮೆಚ್ಚಿಕೊಕಂಡಿದ್ದಾರೆ. 

ಉಡ್ತಾ ಪಂಜಾಬ್ ಚಿತ್ರದ ದಿಲ್ಜಿತ್ ದೋಸಾಂಜ್, ತಾಜ್ ಮುಂದೆ ಇವಾಂಕಾ ತನ್ನನ್ನು ತಾಜ್ ಮಹಲ್'ಗೆ ಕರೆದೊಯ್ಯುವಂತೆ ಪೀಡಿಸುತ್ತಿದ್ದಳು. ಹೀಗಾಗಿ ಅನ್ಯಮಾರ್ಗ ಕಾಣದೇ, ಆಕೆಯನ್ನು ತಾಜ್ ಮಹಲ್'ಗೆ ಕರೆದೊಯ್ದೆ ಎಂದು ಟ್ವಿಟರ್ ನಲ್ಲಿ ಹಾಕಿದ್ದಾರೆ. 

ಈ ಫೋಟೋಗಳಿಗೆ ಪ್ರತಿಕ್ರಿಯೆ ನೀಡಿರುವ ಇವಾಂಕಾ, ಅತ್ಯದ್ಭುತ ತಾಜ್'ಗೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು. ಈ ಅಪೂರ್ವ ಕ್ಷಣಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹಾಸ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com