ಮಹದಾಯಿ ಖ್ಯಾತೆ, ಕರ್ನಾಟಕದ ವಿರುದ್ದ ಸುಪ್ರೀಂ ಕೋರ್ಟ್ ಗೆ ಗೋವಾ ದೂರು

ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಕರ್ನಾಟಕ ಕಾನೂನುಬಾಹಿರವಾಗಿ ಕಾಮಗಾರಿ ನಡೆಸಿದೆ ಎಂದು ಗೋವಾದ ಮುಖ್ಯಮಂತ್ರಿ  ಪ್ರಮೋದ್ ಸಾವಂತ ದೂರಿದ್ದಾರೆ. 
ಗೋವಾ ಸಿಎಂ ಪ್ರಮೋದ್ ಸಾವಂತ್
ಗೋವಾ ಸಿಎಂ ಪ್ರಮೋದ್ ಸಾವಂತ್

ಪಣಜಿ: ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಕರ್ನಾಟಕ ಕಾನೂನುಬಾಹಿರವಾಗಿ ಕಾಮಗಾರಿ ನಡೆಸಿದೆ ಎಂದು ಗೋವಾದ ಮುಖ್ಯಮಂತ್ರಿ  ಪ್ರಮೋದ್ ಸಾವಂತ ದೂರಿದ್ದಾರೆ. 
 
ಈ ಹಿನ್ನೆಲೆಯಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಅಧಿಕಾರಿಗಳು ಜಂಟಿಯಾಗಿ ಮಹದಾಯಿ  ಕಳಸಾ ಬಂಡೂರಿ  ನಾಲೆಗಳ  ಪರಿಶೀಲನೆ ನಡೆಸಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ  ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಕರ್ನಾಟಕ ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಸಾಧ್ಯವೇ ಇಲ್ಲ, ಮಹದಾಯಿ ಪ್ರಕರಣದಲ್ಲಿ ಯಾರು ರಾಜಕಾರಣ ಮಾಡುತ್ತಿರುವವರು ಮಹದಾಯಿ ನದಿ ಹುಟ್ಟುವ ಮತ್ತು ಹರಿಯುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎಂದು ಅವರು  ತಿರುಗೇಟು ನೀಡಿದ್ದಾರೆ.
 
ಕರ್ನಾಟಕದ ಒತ್ತಾಯದ ಮೇರೆಗೆ  ಕೇಂದ್ರ ಅಧಿಸೂಚನೆ ಹೊರಡಿಸಿದೆ ಅಂದ ಮಾತ್ರಕ್ಕೆ ಯೋಜನೆಗೆ ಕೇಂದ್ರದಿಂದ ಎಲ್ಲ ರೀತಿಯ ಪರವಾನಗಿ ಲಭಿಸಿದೆ ಎಂದೂ ಬಾವಿಸಿಕೊಳ್ಳಬೇಕಿಲ್ಲ. ಅರಣ್ಯ ಇಲಾಖೆ ಪರವಾನಗಿ ಲಭಿಸಲು ಇನ್ನೂ ಹೆಚ್ಚಿನ ಸಮಯ ಬೇಕಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com