ಉಮರ್ ಅಬ್ದುಲ್ಲಾ ಬಿಡುಗಡೆ ಕೋರಿ ಸಾರಾ ಪೈಲಟ್ ಅರ್ಜಿ: ಗುರುವಾರಕ್ಕೆ ವಿಚಾರಣೆ ಮುಂದೂಡಿದ 'ಸುಪ್ರೀಂ'

ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ ಎ)ಯಡಿ ಬಂಧನದಲ್ಲಿರುವ ತಮ್ಮ ಸಹೋದರ, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೆ ಸೂಚಿಸಬೇಕು ಎಂದು ಕೋರಿ ಸಾರಾ ಅಬ್ದುಲ್ಲಾ ಪೈಲಟ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಉಮರ್ ಅಬ್ದುಲ್ಲಾ
ಉಮರ್ ಅಬ್ದುಲ್ಲಾ

ನವದೆಹಲಿ: ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ ಎ)ಯಡಿ ಬಂಧನದಲ್ಲಿರುವ ತಮ್ಮ ಸಹೋದರ, ಜಮ್ಮುಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೆ ಸೂಚಿಸಬೇಕು ಎಂದು ಕೋರಿ ಸಾರಾ ಅಬ್ದುಲ್ಲಾ ಪೈಲಟ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

ಮಾರ್ಚ್ 5ರಂದು ಇದರ ವಿಚಾರಣೆ ನಡೆಸುತ್ತೇವೆ. ಆ ದಿನ ಈ ಅರ್ಜಿ ಪಟ್ಟಿಯಲ್ಲಿ ಬರಲಿದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಸಾರಾ ಅಬ್ದುಲ್ಲಾ ಪರ ಹಾಜರಾದ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಈ ಹಿಂದೆ ಅಬ್ದುಲ್ಲಾ ಅವರನ್ನು ಸಿಆರ್ ಪಿಸಿ 107 ಸೆಕ್ಷನ್ ನಡಿ ಬಂಧಿಸಿಡಲಾಗಿತ್ತು. ಆದರೆ ಈಗ ಜಮ್ಮು ಕಾಶ್ಮೀರ ಸುರಕ್ಷಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com