ಬಜೆಟ್ ಅಧಿವೇಶನ: ದೆಹಲಿ ಹಿಂಸಾಚಾರ ಕುರಿತು ತೀವ್ರ ಗದ್ದಲ, ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಸಂಸತ್ತಿನ ಬಜೆಟ್ ಅಧಿವೇಶನದ 2ನೇ ಚರಣ ಸೋಮವಾರದಿಂದ ಆರಂಭಗೊಂಡಿದ್ದು, ದೆಹಲಿ ಹಿಂಸಾಚಾರ ಕುರಿತು ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗ ಮುಂದೂಡಲಾಗಿದೆ. 
ಬಜೆಟ್ ಅಧಿವೇಶನ: ದೆಹಲಿ ಹಿಂಸಾಚಾರ ಕುರಿತು ತೀವ್ರ ಗದ್ದಲ, ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಬಜೆಟ್ ಅಧಿವೇಶನ: ದೆಹಲಿ ಹಿಂಸಾಚಾರ ಕುರಿತು ತೀವ್ರ ಗದ್ದಲ, ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ 2ನೇ ಚರಣ ಸೋಮವಾರದಿಂದ ಆರಂಭಗೊಂಡಿದ್ದು, ದೆಹಲಿ ಹಿಂಸಾಚಾರ ಕುರಿತು ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗ ಮುಂದೂಡಲಾಗಿದೆ. 

ಲೋಕಸಭೆಯಲ್ಲಿ ಕಪಾಲ ಆರಂಭವಾಗುತ್ತಿದ್ದಂತೆಯೇ ಸದನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಆಗಮಿಸಿದರು. ಈ ವೇಳೆ ಕೆಲ ಸಂಸದರು ಸ್ವಾಗತ ಮತ್ತು ಜೈ ಶ್ರೀರಾಮ್ ಎಂದು ಕೂಗಿದರು. ಈ ವೇಳೆ ಕೆಲ ವಿರೋಧ ಪಕ್ಷದ ನಾಯಕರು ದೆಹಲಿ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ಸ್ಪೀಕರ್ ಅವಕಾಶ ನೀಡದೆ ನಿಧನ ಹೊಂದಿದ ಜೆಡಿಯು ನಾಯಕ ಬೈದ್ಯನಾಥ್ ಪ್ರಸಾತ್ ಮಹ್ತೋ ಅವರಿಗೆ ಸಂತಾಪ ಸೂಚಿಸಿ ಕಲಾಪವನ್ನು 2 ಗಂಟೆಗೆ ಮುಂದೂಡಿದರು. 

ಇನ್ನು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳು ದೆಹಲಿ ಹಿಂಸಾಚಾರ ಪ್ರಸ್ತಾಪಿಸಿ ತೀವ್ರ ಗದ್ದಲವನ್ನುಂಟು ಮಾಡಿದರು. 

ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿದ ಪಕ್ಷ ಹಾಗೂ ಡಿಎಂಕ ಪಕ್ಷಗಳು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. 

ಈ ವೇಲೆ ಮಾತನಾಡಿದ ವೆಂಕಯ್ಯ ನಾಯ್ಡು, ವಿಚಾರ ಅತ್ಯಂತ ಮುಖ್ಯವಾದದ್ದು. ಆದರೆ, ಶಾಂತಿ ಸ್ಥಾಪನಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಬಳಿಕವಷ್ಟೇ ಚರ್ಚೆಗೆ ದಾರಿ ಮಾಡಿಕೊಡಲಾಗುತ್ತದೆ ಎಂದರು. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ವಿಪಕ್ಷ ನಾಯಕರು ಗದ್ದಲವನ್ನು ಮುಂದುವರೆಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com