ಮೋದಿ ಭಕ್ತರೂ ಸೋಷಿಯಲ್ ಮೀಡಿಯಾ ತೊರೆದರೆ ದೇಶ ನೆಮ್ಮದಿಯಾಗಿರುತ್ತದೆ: ಎನ್​ಸಿಪಿ

ಪ್ರಧಾನಿ ನರೇಂದ್ರ ಮೋದಿ ತಾತ್ಕಾಲಿಕವಾಗಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಕುರಿತಂತೆ ಟ್ವೀಟ್ ಮಾಡಿದ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯ ಮಾಡಿರುವ ಎನ್ ಸಿಪಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೋದಿ ಭಕ್ತರೂ ಸಾಮಾಜಿಕ ಜಾಲತಾಣ ತ್ಯಜಿಸಿದರೆ ದೇಶ ನೆಮ್ಮದಿಯಾಗಿರುತ್ತದೆ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ತಾತ್ಕಾಲಿಕವಾಗಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಕುರಿತಂತೆ ಟ್ವೀಟ್ ಮಾಡಿದ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯ ಮಾಡಿರುವ ಎನ್ ಸಿಪಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೋದಿ ಭಕ್ತರೂ ಸಾಮಾಜಿಕ ಜಾಲತಾಣ ತ್ಯಜಿಸಿದರೆ ದೇಶ ನೆಮ್ಮದಿಯಾಗಿರುತ್ತದೆ ಎಂದು ಹೇಳಿದೆ.

ಪ್ರಧಾನಿ ಮೋದಿ ಮಾಡಿದ ಟ್ವೀಟ್ ಬಗ್ಗೆ ಮಾತನಾಡಿದ ಮಹಾರಾಷ್ರ್ಟ ಸಚಿವ ಹಾಗೂ ಎನ್​ಸಿಪಿ ವಕ್ತಾರ ನವಾಬ್ ಮಲ್ಲಿಕ್ ಅವರು, ಮೋದಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಬಗ್ಗೆ ನಿನ್ನೆ ಸುಳಿವು ನೀಡಿದ್ದಾರೆ. ಅವರ ಜೊತೆ ಕೆಲ ಮಂತ್ರಿಗಳು ಸಹ ಸಾಮಾಜಿಕ ಜಾಲತಾಣವನ್ನು ತೊರೆಯುವ ಯೋಚನೆಯಲ್ಲಿದ್ದಾರೆ. ಇದನ್ನೇ ಎಲ್ಲಾ ಮೋದಿ ಭಕ್ತರು ಸಹ ಅನುಸರಿಸಿದರೆ ದೇಶ ನೆಮ್ಮದಿಯಿಂದ ಇರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಮೋದಿ ಅವರ ಈ ನಿರ್ಧಾರ ದೇಶಕ್ಕೆ ಹಿತವಾಗಿರುತ್ತದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ಟ್ವಟ್ಟರ್​ನಲ್ಲಿ "ModiQuitsSocialMedia" ಎಂಬ ಹ್ಯಾಶ್ ಟ್ಯಾಗ್ ಬಳಸಿ ಹಾಕಿದ್ದಾರೆ. 

ಇನ್ನು ನಿನ್ನೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿಯವರ ಟ್ವೀಟ್ ಅನ್ನು ಟ್ಯಾಗ್ ಮಾಡುತ್ತಾ, ದ್ವೇಷವನ್ನು ಬಿಡಿ, ಸಾಮಾಜಿಕ ಜಾಲತಾಣವನ್ನಲ್ಲ ಎಂದಿದ್ದರು.

ಇದೇ ಭಾನುವಾರದಂದು ಫೇಸ್​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಮತ್ತು ಯೂಟ್ಯೂಬ್​ನಲ್ಲಿರುವ ನನ್ನ ಸೋಷಿಯಲ್ ಮೀಡಿಯಾ ಖಾತೆಗಳಿಂದ ಹೊರಬರಲು ಯೋಚಿಸುತ್ತಿದ್ದೇನೆ. ಈ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ” ಎಂದು ಪ್ರಧಾನಿ ಮೋದಿ ನಿನ್ನೆ ತಮ್ಮ ವಿವಿಧ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿ ಅಚ್ಚರಿ ಹುಟ್ಟುಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com