ಪತ್ನಿ 'ಕೊಲೆ' ಆರೋಪದ ಮೇಲೆ ಜೈಲು: ಪ್ರಿಯಕರನ ಜೊತೆಗೆ ಓಡಿಹೋಗಿದ್ದ ಪತ್ನಿ ತಂದು ಪೊಲೀಸರ ಎದುರು ನಿಲ್ಲಿಸಿದ ಪತಿ

ಮಾಡದ ತಪ್ಪಿಗೆ ಕೊಲೆ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಬಂದ ವ್ಯಕ್ತಿಯೊಬ್ಬ, ಬಳಿಕ ತಾನು ಅಮಾಯಕನೆಂದು ಸಾಬೀತುಪಡಿಸಲು ಪ್ರಿಯಕರನೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಹುಡುಕಿ ತಂದು ಪೊಲೀಸರ ಎದುರು ನಿಲ್ಲಿಸಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.
ಮಾಡದ ತಪ್ಪಿಗೆ ಜೈಲು: ಪ್ರಿಯಕರನ ಜೊತೆಗೆ ಓಡಿಹೋಗಿದ್ದ ಪತ್ನಿ ತಂದು ಪೊಲೀಸರ ಎದುರು ನಿಲ್ಲಿಸಿದ ವ್ಯಕ್ತಿ
ಮಾಡದ ತಪ್ಪಿಗೆ ಜೈಲು: ಪ್ರಿಯಕರನ ಜೊತೆಗೆ ಓಡಿಹೋಗಿದ್ದ ಪತ್ನಿ ತಂದು ಪೊಲೀಸರ ಎದುರು ನಿಲ್ಲಿಸಿದ ವ್ಯಕ್ತಿ

ಕೇಂದ್ರಪಾರ: ಮಾಡದ ತಪ್ಪಿಗೆ ಕೊಲೆ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಬಂದ ವ್ಯಕ್ತಿಯೊಬ್ಬ, ಬಳಿಕ ತಾನು ಅಮಾಯಕನೆಂದು ಸಾಬೀತುಪಡಿಸಲು ಪ್ರಿಯಕರನೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಹುಡುಕಿ ತಂದು ಪೊಲೀಸರ ಎದುರು ನಿಲ್ಲಿಸಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. 

ಪಟ್ಕುರಾದ ಚೌಲಿಯಾ ಗ್ರಾಮದ ನಿವಾಸಿಯಾಗಿರುವ ಅಭಯ್ ಸುತಾರ್ ಎಂಬುವವರು 2013 ಫೆ.7 ರಂದು ಇತಿಶ್ರೀ ಎಂಬಾಕೆಯನ್ನು ವಿವಾಹವಾಗಿದ್ದರು. ಮದುವೆಯಾದ ಎರಡೇ ತಿಂಗಳಲ್ಲಿಯೇ ಇತಿಶ್ರೀ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ನಡೆಸಿದರೂ ಇತಿಶ್ರೀ ಪತ್ತೆಯಾಗಿರಲಿಲ್ಲ. ಬಳಿಕ 2013 ಏಪ್ರಿಲ್20ರಂದು ಅಭಯ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮೇ.14 ರಂದು ಇತಿಶ್ರೀ ತಂದೆ ಅಭಯ್ ವಿರುದ್ಧ ದೂರು ದಾಖಲಿಸಿ ನನ್ನ ಮಗಳಿಗೆ ಅಭಯ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಮಗಳನ್ನು ಕೊಲೆ ಮಾಡಿ ದೇಹವನ್ನು ಯಾರಿಗೂ ತಿಳಿಯದಂತೆ ಹೂತಿದ್ದಾನೆಂದು ಆರೋಪಿಸಿದ್ದರು. 

ಪ್ರಕರಣ ಸಂಬಂಧ ಅಭಯ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ಆತನನ್ನು ಬಂಧನಕ್ಕೊಳಪಡಿಸಿ, ಕಾರಾಗೃಹಕ್ಕೆ ಕಳುಹಿಸಿದ್ದರು. ಕೆಲ ತಿಂಗಳುಗಳ ಬಳಿಕ ಅಭಯ್ ಅವರು ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದರು. 

ಇದಾದ ಬಳಿಕ ತಾನು ಮಾಡದ ತಪ್ಪಿಗೆ ಜೈಲು ಅನುಭವಿಸಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತನಾಗಿ ತಪ್ಪಿತಸ್ಥನಲ್ಲ ಎಂಬುದನ್ನು ಸಾಬೀತು ಮಾಡಲು ಪತ್ನಿಗಾಗಿ ಅಭಯ್ ತೀವ್ರ ಹುಡುಕಾಟ ನಡೆಸಿದ್ದಾರೆ. ಪತ್ನಿ ಪ್ರಿಯಕರನೊಂದಿಗೆ ಓಡಿಹೋಗಿರಬಹುದು ಎಂದು ಶಂಕಿಸಿ ಎಲ್ಲೆಡೆ ಹುಡುಕಾಟ ಆರಂಭಿಸಿದ್ದ. ಇದರಂತೆ ಇತಿಶ್ರೀ ಪಿಪಿಲಿ ಎಂಬ ಪ್ರದೇಶದಲ್ಲಿ ಪ್ರಿಯಕರನೊಂದಿಗೆ ವಾಸವಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಅಭಯ್ ಪೊಲೀಸರನ್ನು ಸ್ಥಳಕ್ಕೆ ಕರೆತಂದು ಇತಿಶ್ರೀ ಹಾಗೂ ಆಕೆಯ ಪ್ರಿಯಕರನ್ನು ತೋರಿಸಿದ್ದಾನೆ. ಬಳಿಕ ಪೊಲೀಸರೂ ಇಬ್ಬರನ್ನು ಬಂಧನಕ್ಕೊಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಈ ವೇಳೆ ಹೇಳಿಕೆ ನೀಡಿರುವ ಇತಿಶ್ರೀ, ಮದುವೆಗೂ ಮುನ್ನವೇ ರಾಜೀವ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದು, ಆತನೊಂದಿಗೆ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಾಳೆ. ಪೋಷಕರು ನಮ್ಮಿಬ್ಬರ ಪ್ರೀತಿಗೆ ವಿರುದ್ಧವಾಗಿದ್ದರು. ಬಳಿಕ ಬಲವಂತದಿಂದ ಅಭಯ್ ಜೊತೆಗೆ ವಿವಾಹ ಮಾಡಿಸಿದ್ದರು ಎಂದು ಹೇಳಿದ್ದಾಳೆ. ಪ್ರಿಯಕರನೊಂದಿಗೆ ವಾಸವಿದ್ದ ಇತಿಶ್ರೀಗೆ ಇಬ್ಬರು ಮಕ್ಕಳಿರುವುದು ಕಂಡು ಬಂದಿದೆ. 

ಇತಿಶ್ರೀ ಹುಡುಕುವಲ್ಲಿ ಪೊಲೀಸರು ವಿಫಲರಾದ ಹಿನ್ನೆಲೆಯಲ್ಲಿ ನಾನೇ ಸ್ವಯಂಪ್ರೇರಿತನಾಗಿ ಹುಡುಕಲು ಆರಂಭಿಸಿದ್ದೆ. 7 ವರ್ಷಗಳಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಹುಡುಕಾಟ ನಡೆಸಿದ್ದೆ. ಇದೀಗ ನನ್ನ ಮುಗ್ಧತೆಯನ್ನು ನಾನು ಸಾಬೀತು ಪಡಿಸಿದ್ದೇನೆ. ನಾನು ಸಂತೃಪ್ತ ವ್ಯಕ್ತಿಯಾಗಿದ್ದೇನೆಂದು ಅಭಯ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com