ದೆಹಲಿ ಹಿಂಸಾಚಾರ ಕುರಿತಂತೆ ಲೋಕಸಭೆಯಲ್ಲಿ ಕೋಲಾಹಲ: ಕಲಾಪ ನಾಳೆಗೆ ಮುಂದೂಡಿಕೆ

ನಲವತ್ತಾರು ಮಂದಿಯನ್ನು ಬಲಿ ಪಡೆದ ದೆಹಲಿ ಹಿಂಸಾಚಾರ ವಿಷಯ ಕುರಿತಂತೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಉಂಟಾಗಿ ಕೋಲಾಹಲ ವಾತಾವರಣ ನಿರ್ಮಾಣವಾಗಿದ್ದರಿಂದ ಎರಡನೇ ದಿನವಾದ ಮಂಗಳವಾರವೂ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಲೋಕಸಭೆ
ಲೋಕಸಭೆ

ನವದೆಹಲಿ: ನಲವತ್ತಾರು ಮಂದಿಯನ್ನು ಬಲಿ ಪಡೆದ ದೆಹಲಿ ಹಿಂಸಾಚಾರ ವಿಷಯ ಕುರಿತಂತೆ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಉಂಟಾಗಿ ಕೋಲಾಹಲ ವಾತಾವರಣ ನಿರ್ಮಾಣವಾಗಿದ್ದರಿಂದ ಎರಡನೇ ದಿನವಾದ ಮಂಗಳವಾರವೂ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.

ದೆಹಲಿ ಹಿಂಸಾಚಾರ ವಿಷಯವನ್ನು ಮಾರ್ಚ್ 11ರಂದು ಚರ್ಚೆಗೆ ಕೈಗೆತ್ತಿಕೊಳ್ಳುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದರೂ ಸಹ ತಕ್ಷಣವೇ ಚರ್ಚೆಗೆ ಕೈಗೆತ್ತಿಕೊಳ್ಳುವಂತೆ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದು ಗದ್ದಲ ಉಂಟುಮಾಡಿದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಸ್ ಪಿ ಮತ್ತು ಬಿಎಸ್ ಪಿ ಸದಸ್ಯರು ಜೋರಾಗಿ ಘೋಷಣೆಗಳನ್ನು ಕೂಗಿದರು. ಕೆಲ ಸದಸ್ಯರು ಸ್ಪೀಕರ್ ಪೀಠ ಎದುರಿನ ಬಾವಿಗಿಳಿದು ಸದನ ಕಲಾಪಗಳು ಮುಂದುವರೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. 

ಗದ್ದಲದ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕಿಂಗ್ ನಿಯಂತ್ರಣಾ(ತಿದ್ದುಪಡಿ) ಮಸೂದೆ ಮಂಡಿಸಿದರು. ಮಸೂದೆ ಅಂಗೀಕಾರಕ್ಕೆ ಸ್ಪೀಕರ್ ಮುಂದಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಜೋರಾಗಿ ಕೂಗಾಡಿದರು. ಇದರ ಮಧ್ಯೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆಡಳಿತ ಪಕ್ಷದ ಸದಸ್ಯರ ಕಡೆಯ ಬಾವಿಗೆ ಇಳಿದು ಪ್ರತಿಭಟಿಸಿದರು. 

ಬಿಜೆಪಿ ಸದಸ್ಯ ಲಾಕೆಟ್ ಚಟರ್ಜಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಚೌಧರಿ ಅವರನ್ನು ಅವರ ಕುರ್ಚಿಯಲ್ಲಿ ಕೂರಿಸಲು ಪ್ರಯತ್ನಿಸಿದರು. ಸದನದಲ್ಲಿ ಇಂದು ಬೆಳಿಗ್ಗೆ, ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ಕಾರ್ಯಕಲಾಪಗಳು ನಡೆಯುವ ವೇಳೆ ತಮ್ಮ ಆಸನ ಬಿಟ್ಟು ಓಡಾಡುವ ಯಾವುದೇ ಸದಸ್ಯ, ಯಾವುದೇ ಪಕ್ಷಕ್ಕೆ ಸೇರಿದ್ದರೂ ಕ್ರಮ ತೆಗೆದುಕೊಳ್ಳಲು ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂತಹ ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗುವುದು ಎಂದು ಹೇಳಿದರು. 

ಘೋಷಣೆಗಳ ನಡುವೆ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆ ಸಚಿವಾಲಯದ ಕಾಗದಗಳನ್ನು ಮುಟ್ಟಿದ ಕಾಂಗ್ರೆಸ್ ಸದಸ್ಯ ಕೆ.ಸುರೇಶ್ ರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಎಲ್ಲ ಪಕ್ಷಗಳೊಂದಿಗೆ ಚರ್ಚೆಗಳು ನಡೆದಿವೆ. ದೇಶದ ಒಳತಿಗಾಗಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿನ ಇಂದಿನ ಸನ್ನಿವೇಶಗಳನ್ನು ಗಮನಿಸಿ ಹೋಲಿ ಹಬ್ಬದ ನಂತರ ಮಾರ್ಚ್ 11ರಂದು ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗುವುದು.’ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ನ ಮಹುವಾ ಮೊಯ್‌ತ್ರ ಅವರು ಕಾಗದ ಪತ್ರಗಳನ್ನು ಹರಿದು ಹಾಕಿ, ಸಭಾಧ್ಯಕ್ಷರ ಪೀಠದ ಕಡೆ ಆಗಿಂದಾಗ್ಗೆ ಎಸೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com