ಸೋಷಿಯಲ್ ಮೀಡಿಯಾದಿಂದ ಹೊರಬರುತ್ತೇನೆಂದು ಶಾಕ್ ಕೊಟ್ಟ ಪ್ರಧಾನಿ: ಮೋದಿ ಪ್ರೊಫೈಲ್ ಫೋಟೋ ಹಾಕಿದ್ದ ಝುಕರ್ ಬರ್ಗ್!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು. ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ.
2015ರಲ್ಲಿ ಫೇಸ್ ಬುಕ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮ
2015ರಲ್ಲಿ ಫೇಸ್ ಬುಕ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮ

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು. ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಕೋಟ್ಯಂತರ ಅನುಯಾಯಿಗಳು ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ದೇಶ-ವಿದೇಶಗಳಲ್ಲಿ ಇದ್ದಾರೆ. ಇಂತವರು ನಿನ್ನೆ ಒಂದು ಬಾಂಬ್ ಹಾಕಿದ ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕಿದರು. ಅದು ನಾನು ಭಾನುವಾರದಿಂದ ಸೋಷಿಯಲ್ ಮೀಡಿಯಾದಿಂದ ಹೊರಬರುತ್ತಿದ್ದೇನೆ ಎಂದು.


ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಒಮ್ಮೆ ಪ್ರಧಾನಿ ಮೋದಿಯವರನ್ನು ತಮ್ಮ ಕಂಪೆನಿಯ ಕೇಂದ್ರ ಕಚೇರಿಗೆ ಕರೆದು ಆತಿಥ್ಯ ಮಾಡಿದ್ದಲ್ಲದೆ ಮೋದಿಯವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸಿಕೊಂಡಿದ್ದರು. ಅದು 2015ರ ಸೆಪ್ಟೆಂಬರ್ ತಿಂಗಳು, ಮಾರ್ಕ್ ಝುಕರ್ ಬರ್ಗ್ ಅವರು ಮೋದಿಯವರನ್ನು ಅಮೆರಿಕದ ತಮ್ಮ ಕ್ಯಾಲಿಫೋರ್ನಿಯಾದಲ್ಲಿರುವ ಫೇಸ್ ಬುಕ್ ಕೇಂದ್ರ ಕಚೇರಿಗೆ ಕರೆದು ಅಲ್ಲಿ ವಿಶೇಷ ಸಭೆ ನಡೆಸಿದ್ದರು.

ಮೋದಿಯವರ ಜೊತೆ ಸಂವಾದ ನಡೆಸಿದ ಕೆಲವೇ ನಿಮಿಷಗಳಲ್ಲಿ ಮಾರ್ಕ್ ಝುಕರ್ ಬರ್ಗ್ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಿಸಿ ತಮ್ಮ ಮತ್ತು ಮೋದಿಯವರ ಫೋಟೋ ಹಾಕಿ ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿದೆ ಎಂದು ಬರೆದಿದ್ದರು. ಪ್ರೊಫೈಲ್ ಫೋಟೋದ ಬದಿಗೆ ಭಾರತದ ತ್ರಿವರ್ಣ ಧ್ವಜದ ಬಣ್ಣಗಳಿದ್ದವು. ಈ ಸಂದರ್ಭದಲ್ಲಿ ಮೋದಿಯವರು ಕೂಡ ಫೇಸ್ ಬುಕ್ ನಲ್ಲಿ ಪ್ರೊಫೈಲ್ ಫೋಟೋ ಬದಲಿಸಿಕೊಂಡರು. ಅವರ ಸೋಷಿಯಲ್ ಮೀಡಿಯಾ ಮೇಲಿನ ಒಲವನ್ನು ಬಹಿರಂಗಪಡಿಸಿದ್ದರು. ನಾನು ಅಷ್ಟೊಂದು ವಿದ್ಯಾವಂತನಲ್ಲ, ನನ್ನ ಸುತ್ತ ಕೆಲವು ಶಬ್ದಗಳು ಮಾತ್ರ ಸುತ್ತುತ್ತಿದ್ದವು. ಸೋಷಿಯಲ್ ಮೀಡಿಯಾ ನನ್ನಲ್ಲಿನ ಅಂತರವನ್ನು ಕಡಿಮೆ ಮಾಡಿದೆ ಎಂದು ಆ ಸಮಯದಲ್ಲಿ ಮೋದಿ ಹೇಳಿದ್ದರು.


ಹೀಗಿರುವ ಮೋದಿಯವರು ಸೋಷಿಯಲ್ ಮೀಡಿಯಾಗಳಿಂದ ಹೊರಬರುತ್ತೇನೆ ಎಂದು ಹೇಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೋದಿಯವರು ಏನೋ ಇದರಲ್ಲಿ ಟ್ವಿಸ್ಟ್ ಕೊಡಲಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com