ನಿಮ್ಮ ಸಾಮಾಜಿಕ ಮಾಧ್ಯಮ ನಿರ್ವಹಣಾ ಅವಕಾಶ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನೀಡಿ: ಮೋದಿಗೆ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಅಧಿಕಾರವನ್ನು ಜನರಿಗೆ ಸ್ಪೂರ್ತಿ ಮತ್ತು ಉತ್ತೇಜನ ನೀಡುವ ಮಹಿಳೆಗೆ ನೀಡುವುದಾಗಿ ಹೇಳಿದ ನಂತರ, ನಿಮ್ಮ ಸಾಮಾಜಿಕ ಮಾಧ್ಯಮಗಳ ನಿರ್ವಹಣಾ ಅವಕಾಶವನ್ನು ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನೀಡುವಂತೆ ಪ್ರಧಾನಿಗೆ ಕಾಂಗ್ರೆಸ್ ಸಲಹೆ ನೀಡಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಅಧಿಕಾರವನ್ನು ಜನರಿಗೆ ಸ್ಪೂರ್ತಿ ಮತ್ತು ಉತ್ತೇಜನ ನೀಡುವ ಮಹಿಳೆಗೆ ನೀಡುವುದಾಗಿ ಹೇಳಿದ ನಂತರ, ನಿಮ್ಮ ಸಾಮಾಜಿಕ ಮಾಧ್ಯಮಗಳ ನಿರ್ವಹಣಾ ಅವಕಾಶವನ್ನು ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನೀಡುವಂತೆ ಪ್ರಧಾನಿಗೆ ಕಾಂಗ್ರೆಸ್ ಸಲಹೆ ನೀಡಿದೆ.

ಮಹಿಳಾ ದಿನದಂದು ನಿಮ್ಮ ಸಾಮಾಜಿಕ ಮಾಧ್ಯಮಗಳ ನಿರ್ವಹಣಾ ಅವಕಾಶವನ್ನು ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನೀಡಿ, ಅವಳು ದೇಶದ ಜನತೆಗೆ ತನ್ನ ಕಥೆ ಹೇಳಿಕೊಳ್ಳಲು ಅರ್ಹಳು ಎಂದು ಕಾಂಗ್ರೆಸ್ ಮಹಿಳಾ ಘಟಕದ ಮುಖ್ಯಸ್ಥೆ ಸುಷ್ಮಿತಾ ದೇವ್ ಅವರು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮಹಿಳೆಯರಿಗೆ ಹಸ್ತಾಂತರಿಸುವ ಪ್ರಧಾನಿ ಮೋದಿಯವರ ಭರವಸೆ "ಮಹಿಳಾ ಭದ್ರತೆಯ ವಿಷಯದಲ್ಲಿ ಅವರ ಕೆಟ್ಟ ಚಿತ್ರಣವನ್ನು ಸರಿಪಡಿಸುವ ಒಂದು ಟೊಳ್ಳು ಭರವಸೆ ಮತ್ತು ತೋರಿಕೆಯ ಪ್ರಯತ್ನ" ಅಷ್ಟೆ ಎಂದು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.

ನಿನ್ನೆಯಷ್ಟೇ ತಮ್ಮ ಸಾಮಾಜಿಕ ಮಾಧ್ಯಮಗಳನ್ನು ತ್ಯಜಿಸುವುದಾಗಿ ಹೇಳಿ ಕುತೂಹಲ ಮೂಡಿಸಿದ ಪ್ರಧಾನಿ, ಇಂದು ಮಹಿಳಾ ದಿನದಂದು ತಮ್ಮ ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ಅಧಿಕಾರವನ್ನು ಜನರಿಗೆ ಸ್ಪೂರ್ತಿ ಮತ್ತು ಉತ್ತೇಜನ ನೀಡುವ ಮಹಿಳೆಗೆ ನೀಡುವುದಾಗಿ ಹೇಳುವ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಈ ಬಾರಿ ಮಹಿಳಾ ದಿನಾಚರಣೆ ಪ್ರಯುಕ್ತ ನನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ತಮ್ಮ ಜೀವನ ಮತ್ತು ಸಾಧನೆಗಳ ಮೂಲಕ ಸ್ಪೂರ್ತಿ, ಉತ್ತೇಜನ ನೀಡುವ ಮಹಿಳೆಯರಿಗೆ ನೀಡುತ್ತೇನೆ, ಅಂತವರು ತಮ್ಮ ಜೀವನಗಾಥೆಗಳನ್ನು ಹಂಚಿಕೊಳ್ಳಬಹುದು. ಬೇರೆಯವರು ಕೂಡ ಇಂತಹ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ಮಹಿಳೆಯರ ಬಗ್ಗೆ ಬರೆಯಬಹುದು, ಇದರಿಂದ ಲಕ್ಷಾಂತರ, ಕೋಟ್ಯಂತರ ಮಹಿಳೆಯರಿಗೆ ಉತ್ತೇಜನ ಸಿಕ್ಕಿದಂತಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಇಂತಹ ಮಹಿಳೆಯರ ಸಾಧನೆಗಳನ್ನು ಹ್ಯಾಶ್ ಟಾಗ್ #sheInspiresUs ಎಂದು ಬರೆದು ಟ್ವೀಟ್ ಮಾಡಿ ಎಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com