ನೇರ ತೆರಿಗೆಯ 'ವಿವಾದ್ ಸೆ ವಿಶ್ವಾಸ್ ಮಸೂದೆ- 2020’ ಲೋಕಸಭೆಯಲ್ಲಿ ಅಂಗೀಕಾರ

ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರ ನಡುವೆಯೇ ಲೋಕಸಭೆ ಬುಧವಾರ ನೇರ ತೆರಿಗೆಯ ವಿವಾದ್ ಸೆ ವಿಶ್ವಾಸ್ ಮಸೂದೆ-2020ನ್ನು ಅಂಗೀಕರಿಸಿತು.
ನೇರ ತೆರಿಗೆಯ 'ವಿವಾದ್ ಸೆ ವಿಶ್ವಾಸ್ ಮಸೂದೆ- 2020’ ಲೋಕಸಭೆಯಲ್ಲಿ ಅಂಗೀಕಾರ
ನೇರ ತೆರಿಗೆಯ 'ವಿವಾದ್ ಸೆ ವಿಶ್ವಾಸ್ ಮಸೂದೆ- 2020’ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದರ ನಡುವೆಯೇ ಲೋಕಸಭೆ ಬುಧವಾರ ನೇರ ತೆರಿಗೆಯ ವಿವಾದ್ ಸೆ ವಿಶ್ವಾಸ್ ಮಸೂದೆ-2020ನ್ನು ಅಂಗೀಕರಿಸಿತು.

ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ 5 ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಮಸೂದೆಯು ಆದಾಯ ತೆರಿಗೆ ಮತ್ತು ಕಾರ್ಪೋರೇಟ್ ತೆರಿಗೆಗೆ ಸಂಬಂಧಿಸಿದ ಬಾಕಿ ಇರುವ ತೆರಿಗೆ ವಿವಾದಗಳನ್ನು ಬಗೆಹರಿಸುವ ಕಾರ್ಯವಿಧಾನವನ್ನು ಒದಗಿಸಲಿದೆ. ನೇರ ತೆರಿಗೆಯ 'ವಿವಾದ್ ಸೆ ವಿಶ್ವಾಸ್ ಮಸೂದೆ- 2020’ ಅನ್ನು ಪರಿಗಣನೆ ಮತ್ತು ಅಂಗೀಕಾರಕ್ಕೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ್ದರು. 

2020 ರ ಜ 31 ರವರೆಗೆ ಯಾವುದೇ ನ್ಯಾಯಮಂಡಳಿ ಮುಂದೆ ಮೇಲ್ಮನವಿ ಬಾಕಿ ಇರುವಂತೆ ಮೇಲ್ಮನವಿಯನ್ನು ಆದಾಯ ತೆರಿಗೆ ಪ್ರಾಧಿಕಾರ, ಅಥವಾ ವ್ಯಕ್ತಿ ಅಥವಾ ಎರಡನ್ನೂ ಮಸೂದೆ ವ್ಯಾಖ್ಯಾನಿಸುತ್ತದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳು ಮತ್ತು ಆಯುಕ್ತರು (ಮೇಲ್ಮನವಿಗಳು) ಈ ನ್ಯಾಯಮಂಡಳಿಯ ವೇದಿಕೆಗಳಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com