ಏಳು ತಿಂಗಳ ನಂತರ  ಕಾಶ್ಮೀರದಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಪುನಾರಂಭ

ಕಾಶ್ಮೀರದಲ್ಲಿ ಗುರುವಾರದಿಂದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಈ ಮೂಲಕ ಅಂತ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಕಾಶ್ಮೀರದಲ್ಲಿ ಗುರುವಾರದಿಂದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದ ಒಂದು ದಿನದ ನಂತರ ಈ ಇಂಟರ್ ನೆಟ್ ಸೇವೆಗಳು ಪುನರಾರಂಬವಾಗಿದೆ. ಕಣಿವೆಯಲ್ಲಿ ಏಳು ತಿಂಗಳ ಕಾಲ ಜಾರಿಯಲ್ಲಿದ್ದ ಇನ್ಫಾರ್ಮೇಷನ್ ಬ್ಲಾಕೌಟ್ ಈ ಮೂಲಕ ಅಂತ್ಯವಾಗಿದೆ.

ಜಮ್ಮು ಕಾಶ್ಮೀರದ ಎಲ್ಲಾ ಪ್ರದೇಶಗಳಲ್ಲಿ ಕಳೆದ ವರ್ಷ ಆಗಸ್ಟ್ 4 ರಂದು ಇಂಟರ್ನೆಟ್ ಸೇವೆಗಳು ಬಂದ್ ಆಗಿದ್ದವು.ಅದಾಗಿ ಮರುದಿನ ಎಂದರೆ ಆಗಸ್ಟ್ ಐದಕ್ಕೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು.

"ಇಂದು ಮಧ್ಯಾಹ್ನ ಕಣಿವೆಯಲ್ಲಿ ಬ್ರಾಡ್ಬ್ಯಾಂಡ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ನಿಷೇಧವನ್ನು ಅಧಿಕಾರಿಗಳು ಬುಧವಾರ ರದ್ದು ಮಾಡಿದ್ದರು.ಮೊಬೈಲ್ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಫೇಸ್‌ಬುಕ್ ಮತ್ತು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಂತಹ ಸಾವಿರಾರು ಸೈಟ್‌ಗಳಿಗೆ ಪ್ರವೇಶದ ಮೇಲಿನ ನಿರ್ಬಂಧವನ್ನು ಸರ್ಕಾರ ತೆಗೆದುಹಾಕಿದೆ 

ಆದಾಗ್ಯೂ, ಇಂಟರ್ನೆಟ್ ವೇಗದ ಮೇಲೆ ನಿಯಂತ್ರಣ ಹೇರಲಾಗಿದೆ. ಮೊಬೈಲ್ ಡೇಟಾ ಸೇವೆಯನ್ನು 2ಜಿ ಸೇವೆಗಳಿಗೆ ಸೀಮಿತಗೊಳಿಸಲಾಗಿದೆ."ಸರ್ಕಾರವು ನಿಷೇಧವನ್ನು ತೆಗೆದಿದೆ. ಆದರೆ ಕಳೆದ ಕೆಲವು ತಿಂಗಳಿನಿಂದ ಏನು ಬದಲಾವಣೆಗಳಾಗಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಎಲ್ಲದಕ್ಕೂ ಹೆಚ್ಚಾಗಿ ಈ ರೀತಿಯ ನಿಷೇಧ ಹೇರಿರುವುದು ತಪ್ಪು" ಸಾಫ್ಟ್‌ವೇರ್ ಪ್ರೋಗ್ರಾಮರ್ ನವೀದ್ ಅಂಜುಮ್ ಹೇಳಿದ್ದಾರೆ.

ಇಲ್ತಿಜಾ ಮುಫ್ತಿ, ತನ್ನ ತಾಯಿಯ ಖಾತೆಯಿಂದ ಟ್ವೀಟ್ ಮಾಡಿದ್ದು "ಕಾಶ್ಮೀರಿಗಳ ಮೇಲೆ ಹೇರಲಾಗಿದ್ದ ಇಂಟರ್ನೆಟ್ ನಿಷೇಧದ ಹಿಂದಿನ ನಿರರ್ಥಕತೆಯನ್ನು ಆಡಳಿತವು ಅರಿತುಕೊಂಡಿದೆ ಎಂದು ಹೇಳಿದರು.

ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ  ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಜನವರಿಯಲ್ಲಿ ಹೇಳಿದ ನಂತರ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳನ್ನು ಭಾಗಶಃ ಸಡಿಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com