ಪೇಟಿಎಂ ಉದ್ಯೋಗಿಗೆ ಕೊರೋನಾ ವೈರಸ್ ಪಾಸಿಟಿವ್, ಗುರುಗ್ರಾಮ್ ಕಚೇರಿ 15 ದಿನ ಬಂದ್

ಪೇಟಿಎಂ ಉದ್ಯೋಗಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಗುರುಗ್ರಾಮ್ ಪೇಟಿಎಂ ಕಚೇರಿಯನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುರುಗ್ರಾಮ್: ಪೇಟಿಎಂ ಉದ್ಯೋಗಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಗುರುಗ್ರಾಮ್ ಪೇಟಿಎಂ ಕಚೇರಿಯನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ.

ಮಾರಣಾಂತಿಕ ಸೋಂಕು ಇತರ ಉದ್ಯೋಗಿಗಳಿಗೆ ಹರಡುವ ಸಾಧ್ಯತೆ ಇರುವುದನ್ನು ಗಮನದಲ್ಲಿಟ್ಟುಕೊಂಡು ನಾವು ಕಂಪನಿಯನ್ನು 15 ದಿನಗಳ ಕಾಲ ಬಂದ್ ಮಾಡುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.

"ನಮ್ಮ ಸಹೋದ್ಯೋಗಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸೋಂಕು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಗುರಗ್ರಾಮ್ ಕಚೇರಿ 15 ದಿನಗಳವರೆಗೆ ಮುಚ್ಚಲ್ಪಡುತ್ತದೆ ಮತ್ತು ನೋಯ್ಡಾ ಕಚೇರಿಗಳು ಸೋಮವಾರದಿಂದ ಕಾರ್ಯನಿರ್ವಹಿಸಲಿವೆ" ಎಂದು ಪೇಟಿಎಂ ವಕ್ತಾರರು ಇ-ಮೇಲ್ ನಲ್ಲಿ ತಿಳಿಸಿದ್ದಾರೆ.

ನಿನ್ನೆಯಷ್ಟೇ ಕಂಪನಿಯು ತನ್ನ ಎಲ್ಲಾ ಸಿಬ್ಬಂದಿಗೂ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿತ್ತು, ಇಂದು ಕಚೇರಿಯನ್ನೇ ಬಂದ್ ಮಾಡುವುದಾಗಿ ಹೇಳಿದೆ.

ಇತ್ತೀಚಿಗೆ ಇಟಲಿಯಲ್ಲಿ ರಜೆ ಕಳೆದ ಬಂದ ಕಂಪನಿಯ ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡು ಬಂದಿದ್ದು, ಮನೆಯಿಂದ ಕೆಲಸ ಮಾಡುವಂತೆ ಎಲ್ಲಾ ಸಿಬ್ಬಂದಿಗೂ ಸೂಚಿಸಿರುವುದಾಗಿ ಪೇಟಿಎಂ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿಗೆ ಇರಾನ್ ಗೆ ಪ್ರಯಾಣ ಮಾಡಿದ್ದ ವ್ಯಕ್ತಿಗೆ ಇಂದು ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು, ಇದರೊಂದಿಗೆ
ದೇಶದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಪ್ರಕರಣಗಳ ಪೈಕಿ 17 ಪ್ರಕರಣಗಳು ಜೈಪುರದಲ್ಲಿಯೇ ಪತ್ತೆಯಾಗಿದ್ದು, 16 ಇಟಲಿ ಪ್ರವಾಸಿಗರಲ್ಲಿ ಹಾಗೂ ಓರ್ವ ಭಾರತದ ಚಾಲಕನಲ್ಲಿ ಮಾರಣಾಂತಿಕ ಸೋಂಕು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com