ದೆಹಲಿ ಹಿಂಸಾಚಾರ: ಪೇದೆ ರತನ್ ಲಾಲ್ ಹತ್ಯೆ, ಡಿಸಿಪಿ, ಎಸಿಪಿ ಕೊಲ್ಲುವ ಯತ್ನದ ವಿಡಿಯೋ ಪೋಸ್ಟ್ ಮಾಡಿದ ಕಪಿಲ್ ಮಿಶ್ರಾ!

ಸಿಎಎ ಸಂಬಂಧ ನಡೆದ ಹಿಂಸಾಚಾರದಲ್ಲಿ ದೆಹಲಿಯ ಪೊಲೀಸ್ ಪೇದೆ ರತನ್ ಲಾಲ್ ಹತ್ಯೆಯಾಗಿದ್ದು ಡಿಸಿಪಿ ಮತ್ತು ಎಸಿಪಿಯ ಮೇಲೆ ಉದ್ರಿಕ್ತರು ಹತ್ಯೆ ಯತ್ನ ಮಾಡುತ್ತಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ.
ಪ್ರತ್ಯಕ್ಷ ಚಿತ್ರ
ಪ್ರತ್ಯಕ್ಷ ಚಿತ್ರ

ನವದೆಹಲಿ: ಸಿಎಎ ಸಂಬಂಧ ನಡೆದ ಹಿಂಸಾಚಾರದಲ್ಲಿ ದೆಹಲಿಯ ಪೊಲೀಸ್ ಪೇದೆ ರತನ್ ಲಾಲ್ ಹತ್ಯೆಯಾಗಿದ್ದು ಡಿಸಿಪಿ ಮತ್ತು ಎಸಿಪಿಯ ಮೇಲೆ ಉದ್ರಿಕ್ತರು ಹತ್ಯೆ ಯತ್ನ ಮಾಡುತ್ತಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ. 

ಪ್ರತಿಭಟನಾ ನಿರತರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯುತ್ತಿರುವುದು ಅಲ್ಲದೆ ದೊಣ್ಣೆಗಳಿಂದ ಥಳಿಸಿದ್ದಾರೆ. ಈ ವೇಳೆ ಗಲಭೆಕೋರರಿಗೆ ಸಿಕ್ಕ ರತನ್ ಲಾಲ್ ಗಂಭೀರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ. ಇದೇ ವೇಲೆ ಉದ್ರಿಕ್ತರ ತಂಡ ಡಿಸಿಪಿ ಅಮಿತ್ ಶರ್ಮಾ ಮತ್ತು ಎಸಿಪಿ ಅನೂಜ್ ಅವರ ಮೇಲೆ ದಾಳಿ ಮಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. 

ಬಿಜೆಪಿಯ ಮುಖಂಡ ಕಪಿಲ್ ಮಿಶ್ರಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ, ಗಲಭೆಕೋರರನ್ನು ನಿಯಂತ್ರಿಸಲು ಬಂದ ಪೊಲೀಸರ ಗುಂಪನ್ನು ಸುತ್ತುವರೆದ ಮಹಿಳೆಯರು ಸೇರಿದಂತೆ ಉದ್ರಿಕ್ತರ ಗುಂಪು ಕಲ್ಲುಗಳನ್ನು ತೂರಿದ್ದಾರೆ. ಅಲ್ಲದೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಚಾಂದ್ ಭಾಗ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ ಎಂದು ಬರೆದಿದ್ದಾರೆ. 

ಫೆಬ್ರವರಿ 24ರಂದು ಸಿಎಎ ಪರ-ವಿರೋಧಿಗಳ ನಡುವೆ ಘರ್ಷಣೆ ನಡೆದಿತ್ತು. ನಂತರ ಭೀಕರ ಸ್ವರೂಪ ಪಡೆದ ಹಿಂಸಾಚಾರದಲ್ಲಿ ಬರೋಬ್ಬರಿ 48 ಮಂದಿ ಮೃತಪಟ್ಟಿದ್ದು 250ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. 92 ಗಂಟೆಗಳು ನಡೆದ ಹಿಂಸಾಚಾರದಲ್ಲಿ 92 ಮನೆಗಳು, 57 ಅಂಗಡಿ, 500 ವಾಹನಗಳು, 6 ಗೋಡಾನ್ ಗಳು, 2 ಶಾಲೆಗಳು, 4 ಫ್ಯಾಕ್ಟರಿಗಳು ಮತ್ತು 4 ಧಾರ್ಮಿಕ ಸ್ಥಳಗಳು ಬೆಂಕಿಗಾಹುತಿಯಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com