ದೆಹಲಿ ಹಿಂಸಾಚಾರದ ಬಗ್ಗೆ ಪಕ್ಷಪಾತ ವರದಿ: ಬಿಬಿಸಿ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಸಿಇಒ

ದೆಹಲಿಯಲ್ಲಿ ಇತ್ತೀಚಿನ ಕೆಲ ಹಿಂಸಾಚಾರದ ಘಟನೆಗಳ ಬಗ್ಗೆ ಬಿಬಿಸಿ ಪಕ್ಷಪಾತದಿಂದ ಕೂಡಿದ ಸುದ್ದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಶಶಿ ಶೇಖರ್...
ಶಶಿ ಶೇಖರ್
ಶಶಿ ಶೇಖರ್

ನವದೆಹಲಿ: ದೆಹಲಿಯಲ್ಲಿ ಇತ್ತೀಚಿನ ಕೆಲ ಹಿಂಸಾಚಾರದ ಘಟನೆಗಳ ಬಗ್ಗೆ ಬಿಬಿಸಿ ಪಕ್ಷಪಾತದಿಂದ ಕೂಡಿದ ಸುದ್ದಿ ಪ್ರಸಾರ ಮಾಡಿರುವುದನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಶಶಿ ಶೇಖರ್ ಅವರು ‘ಬಿಬಿಸಿ ವರ್ಷದ ಮಹಿಳಾ ಕ್ರೀಡಾಪಟು’ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ನೀಡಲಾಗಿದ್ದ ಆಮಂತ್ರಣವನ್ನು ತಿರಸ್ಕರಿಸಿದ್ದಾರೆ.

ಆಹ್ವಾನ ತಿರಸ್ಕಕರಿಸಿದ್ದನ್ನು ತಿಳಿಸಿದ ಶಶಿ ಶೇಖರ್ ಅವರು, ರಾಜಧಾನಿಯಲ್ಲಿನ ಹಿಂಸಾಚಾರ ಘಟನೆಗಳ ಕುರಿತು ಒಂದು ಮುಖದ ಬಗ್ಗೆ ಮಾತ್ರ ಬಿಬಿಸಿ ವರದಿ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 3 ರಂದು ಬಿಬಿಸಿ ವರದಿಗಾರ ಯೋಗಿತಾ ಲಿಮಾಯೆ ಮತ್ತು ಇತರರು ವರದಿ ಮಾಡಿದ ಸುದ್ದಿ ಏಕಪಕ್ಷೀಯವಾಗಿದ್ದು, ಇದು ಪರಿಸ್ಥಿತಿ ಮತ್ತಷ್ಟು ವಿಷಮ ಸ್ಥಿತಿಗೆ ತಲುಪಲು ಕಾರಣವಾಗಿದೆ ಎಂದು ಸಿಇಒ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪ್ರಸಾರ ಭಾರತಿ ಭಾರತಿ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com