ವಿದೇಶಾಂಗ ಇಲಾಖೆ ವಕ್ತಾರರಾಗಿ ರವೀಶ್ ಕುಮಾರ್ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವ್:ಸದ್ಯದಲ್ಲೇ ಅಧಿಕೃತ ಘೋಷಣೆ 

ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವ ಅವರು ನೇಮಕಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅನುರಾಗ್ ಶ್ರೀವಾಸ್ತವ್
ಅನುರಾಗ್ ಶ್ರೀವಾಸ್ತವ್

ನವದೆಹಲಿ: ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಾಗಿ ರವೀಶ್ ಕುಮಾರ್ ಅವರ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವ ಅವರು ನೇಮಕಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಅನುರಾಗ್ ಶ್ರೀವಾಸ್ತವ ಅವರು ಪ್ರಸ್ತುತ ಇಥಿಯೋಪಿಯಾ ಮತ್ತು ಆಫ್ರಿಕಾ ಯೂನಿಯನ್ ನ ಭಾರತೀಯ ರಾಯಭಾರಿಯಾಗಿದ್ದಾರೆ. ಇವರು 1999ರಲ್ಲಿ ಭಾರತೀಯ ವಿದೇಶಿ ಸೇವೆ ಪೂರೈಸಿದವರಾಗಿದ್ದಾರೆ.

ಅನುರಾಗ್ ನೇಮಕ ಸಂಬಂಧ ಸದ್ಯದಲ್ಲಿಯೇ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com