ಕೇರಳದ ದೇವಾಲಯದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಶೌಚಾಲಯ! 

ಕೇರಳದ ಸ್ಥಳೀಯ ದೇವಾಲಯವೊಂದರ ಹೊರ ಆವರಣದಲ್ಲಿದ್ದ 'ಬ್ರಾಹ್ಮಣರಿಗೆ ಮಾತ್ರ ಶೌಚಾಲಯದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ
ಶಾಚಾಲಯದ ಚಿತ್ರ
ಶಾಚಾಲಯದ ಚಿತ್ರ

ತ್ರಿಶೂರ್: ಕೇರಳದ ಸ್ಥಳೀಯ ದೇವಾಲಯವೊಂದರ ಹೊರ ಆವರಣದಲ್ಲಿದ್ದ 'ಬ್ರಾಹ್ಮಣರಿಗೆ ಮಾತ್ರ ಶೌಚಾಲಯದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ

ಇಲ್ಲಿನ ಕುಟ್ಟುಮುಕ್ಕು ಮಹಾದೇವ ದೇವಾಲಯದಲ್ಲಿ ಮೂರು ಶೌಚಾಲಯಗಳಿದ್ದು, ಅವುಗಳ ಮೇಲೆ ಪುರುಷರು, ಮಹಿಳೆಯರು ಮತ್ತು ಬ್ರಾಹ್ಮಣರಿಗೆ ಮಾತ್ರ ಎಂಬಂತಹ ನಾಮಫಲಕಗಳನ್ನು ಹಾಕಲಾಗಿತ್ತು. 

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಇದೊಂದು ಅನೈತಿಕ ಪದ್ಧತಿಯಾಗಿದ್ದು, ಪ್ರಗತಿಪರ ರಾಜ್ಯಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ದೇವಾಲಯದ ಹೊರಗಡೆ ಶೌಚಾಲಯವಿದ್ದು, ನಾಮಫಲಕವನ್ನು ಈಗಷ್ಟೇ ಗಮನಕ್ಕೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 20 ವರ್ಷಗಳಿಂದಲೂ ಆ ನಾಮಫಲಕವಿದೆ ಆದರೆ, ಅದರ ವಿರುದ್ಧ ಯಾರೂ ಕೂಡಾ ಧ್ವನಿ ಎತ್ತಿರಲಿಲ್ಲ ಎಂದು ದೇವಾಲಯ ಸಮಿತಿ ಕಣ್ಣನ್ ಹೇಳಿದ್ದಾರೆ.

ದೇವಾಲಯದ ಆರ್ಚಕರು, ಇತರ ಸಿಬ್ಬಂದಿಗಳು ಆ ಪ್ರತ್ಯೇಕ ಶೌಚಾಲಯವನ್ನು ಉಪಯೋಗಿಸುತ್ತಿದ್ದರು. ಅದರ ಮೇಲಿನ ನಾಮಫಲಕವನ್ನು ನೋಡಿರಲಿಲ್ಲ. ಅದು ತಮ್ಮ ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದಿರುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com