ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು: ಎಟಿಎಂಗಳಲ್ಲಿ ಹಣವಿಲ್ಲ, ಬ್ರಾಂಚ್ ಗಳ ಮುಂದೆ ಖಾತೆದಾರರ ಪರದಾಟ

ದೇಶದ ಐದನೇ ಅತೀ ದೊಡ್ಡ ಖಾಸಗಿ ಬಾಂಕಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ ಬಿಐ ಸೂಪರ್ ಸೀಡ್ ಮಾಡುತ್ತಿದ್ದಂತೆಯೇ ಬ್ಯಾಂಕ್ ನ ಗ್ರಾಹಕರು ಬೇಸ್ತು ಬಿದ್ದಿದ್ದು, ತಮ್ಮ ಖಾತೆಗಳಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಐದನೇ ಅತೀ ದೊಡ್ಡ ಖಾಸಗಿ ಬಾಂಕಿಂಗ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ ಬಿಐ ಸೂಪರ್ ಸೀಡ್ ಮಾಡುತ್ತಿದ್ದಂತೆಯೇ ಬ್ಯಾಂಕ್ ನ ಗ್ರಾಹಕರು ಬೇಸ್ತು ಬಿದ್ದಿದ್ದು, ತಮ್ಮ ಖಾತೆಗಳಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ದಿಢೀರ್ ಬೆಳವಣಿಗೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಯೆಸ್ ಬ್ಯಾಂಕ್​ನಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂ ಮಾತ್ರ ಹಿಂಪಡೆಯಬಹುದು ಎಂದು ಲಕ್ಷ್ಮಣ ರೇಖೆ ಹಾಕಿದೆ. ಇದರ ಬೆನ್ನಲ್ಲೇ ಯೆಸ್ ಬ್ಯಾಂಕ್ ಗ್ರಾಹಕರು ಗಾಬರಿಗೊಂಡಿದ್ದು, ತಮ್ಮ ಠೇವಣಿ ಹಣ ಮಣ್ಣುಪಾಲಾಗುತ್ತದೆಂದು ಭಾವಿಸಿ ಹಣ ವಿತ್​ಡ್ರಾ ಮಾಡಲು ಮುಗಿಬಿದ್ದಿದ್ಧಾರೆ. ಯೆಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಫೋನ್ ಪೇ ಸ್ಛಗಿತವಾಗಿದ್ದು, ಸದ್ಯಕ್ಕೆ ಅದು ತನ್ನ ಸೇನೆ ಪುನಾರಂಭಿಸುವ ಪ್ರಯತ್ನದಲ್ಲಿದೆ. 

ಯೆಸ್ ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ರೀತಿಯ ವಹಿವಾಟುಗಳನ್ನು ಆರ್ ಬಿಐ ನಿರ್ಬಂಧಿಸಿದ್ದು. ಇದೇ ಕಾರಣಕ್ಕೆ ಯೆಸ್ ಬ್ಯಾಂಕ್ ಎಟಿಎಂಗಳಲ್ಲಿ ಹಣ ಜಮೆಯಾಗುತ್ತಿಲ್ಲ. ಬ್ರಾಂಚ್ ಗಳಲ್ಲಿ ತಮ್ಮ ಖಾತೆಯಲ್ಲಿರುವ ಹಣ ಹಿಂಪಡೆಯಲು ಖಾತೆದಾರರು ಪರದಾಡುತ್ತಿದ್ದು, ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬ್ರಾಂಚ್ ಗಳ ಮುಂದೆ ಸರತಿ ಸಾಲಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಆರ್ ಬಿಐ ಯೆಸ್ ಬ್ಯಾಂಕ್ ವಹಿವಾಟನ್ನು ನಿರ್ಭಂಧಿಸಿರುವ ಕಾರಣ ಬ್ಕಾಂಚ್ ಗಳಿಗೂ ಹಣ ಹರಿವು ಸುಗಮವಾಗಿ ಆಗುತ್ತಿಲ್ಲ. ಹೀಗಾಗಿ ಬ್ರಾಂಚ್ ಗಳಲ್ಲಿ ನಗದು ಕೊರತೆ ಎದುರಾಗಿದ್ದು, ಇದರ ನೇರ ಪರಿಣಾಮ ಗ್ರಾಹಕರ ಮೇಲಾಗುತ್ತಿದೆ. 

ಅನೇಕ ಉದ್ಯೋಗಿಗಳ ಸಂಬಳದ ಹಣ ಯೆಸ್ ಬ್ಯಾಂಕ್​ನೊಂದಿಗೆ ಜೋಡಿತವಾಗಿದೆ. ಹೀಗಾಗಿ, ಸಾಕಷ್ಟು ಜನರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಇನ್ನು, ಯೆಸ್ ಬ್ಯಾಂಕ್​ನ ಆನ್​ಲೈನ್ ಹಣ ವಹಿವಾಟು ವ್ಯವಸ್ಥೆ ಕೂಡ ಸ್ಥಗಿತಗೊಂಡಿದ್ದು, ಯೆಸ್ ಬ್ಯಾಂಕ್​ನ ಆನ್​ಲೈನ್ ವ್ಯವಸ್ಥೆಯೊಂದಿಗೆ ಜೋಡಿತಗೊಂಡಿರುವ ಫೋನ್ ಪೇನಲ್ಲೂ ವಹಿವಾಟು ಸ್ಥಗಿತಗೊಂಡಿದೆ. ಸ್ವಿಗ್ಗಿ, ಫ್ಲಿಪ್​ಕಾರ್ಟ್, ಜಬೋಂಗ್ ಮೊದಲಾದ ಅನ್​ಲೈನ್ ಸೇವೆ ಸಂಸ್ಥೆಗಳು ಮತ್ತು ಗ್ರಾಹಕರು ಇದರಿಂದ ಬಾಧಿತರಾಗಿದ್ದಾರೆ.

ಯೆಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿರುವ ಜನರು ಹೆದರಬೇಕಿಲ್ಲ. ಅವರ ಹಣ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೂ ಜನರಿಗೆ ಧೈರ್ಯ ಬಂದಿಲ್ಲ. ಹೀಗಾಗಿ ಖಾತೆಯಲ್ಲಿರುವ ತಮ್ಮ ಹಣವನ್ನು ವಾಪಸ್ ಪಡೆಯಲು ಗ್ರಾಹಕರು ಮುಗಿಬಿದಿದ್ದಾರೆ. ಅಂತೆಯೇ ಷೇರುಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್​ನ ಷೇರು ಮೌಲ್ಯ ಪ್ರಪಾತಕ್ಕೆ ಕುಸಿದಿದೆ. ಜನರು ಕಂಗಾಲಾಗಿ ಯೆಸ್ ಬ್ಯಾಂಕ್ ಷೇರುಗಳನ್ನು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇತ್ತ ಯೆಸ್ ಬ್ಯಾಂಕ್ ಗ್ರಾಹಕರಿಗಾಗಿ ಸಂಸ್ಥೆ ಸಹಾಯವಾಣಿಯನ್ನು ತೆರೆದಿದೆಯಾದರೂ ಸಹಾಯವಾಣಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.

ಇತ್ತ ಯೆಸ್ ಬ್ಯಾಂಕ್ ಚೆಕ್ ಗಳನ್ನು ನಿರ್ವಹಿಸದಂತೆ ಆರ್ ಬಿಐ ಸೂಚನೆ ನೀಡಿದ್ದು, ಇದೂ ಕೂಡ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.  

Related Article

ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧ ಹೇರುವ ಮುನ್ನವೇ 265 ಕೋಟಿ ರೂ. ಡ್ರಾ ಮಾಡಿದ್ದ ಗುಜರಾತ್ ಸಂಸ್ಥೆ

ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದೆ: ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಯೆಸ್ ಬ್ಯಾಂಕ್ ಬಿಕ್ಕಟ್ಟು: ಬಿಜೆಪಿ, ಕಾಂಗ್ರೆಸ್'ನಿಂದ ಕೆಸರೆರಚಾಟ ಶುರು

#ಯೆಸ್_ಬ್ಯಾಂಕ್ ಆರ್ಥಿಕ ಬಿಕ್ಕಟ್ಟು; ಬ್ಯಾಂಕ್ ಸಂಸ್ಥಾಪಕ ರಾಣಾಕಪೂರ್ ಗೆ ಇಡಿ ತೀವ್ರ ವಿಚಾರಣೆ

ಯೆಸ್ ಬ್ಯಾಂಕ್'ನಿಂದಾಗಿರುವ ದೋಷಗಳನ್ನು ಆರ್'ಬಿಐ ನೋಡಿಕೊಳ್ಳಲಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮುಂಬೈ ನಿವಾಸದ ಮೇಲೆ ಇಡಿ ದಾಳಿ

ಎಸ್ ಬಿಐನಿಂದ 2,400 ಕೋಟಿ ರೂ.ಗೆ ಯೆಸ್ ಬ್ಯಾಂಕ್ ನ ಶೇ. 49ರಷ್ಟು ಷೇರು ಖರೀದಿ ಸಾಧ್ಯತೆ: ಆರ್ ಬಿಐ

2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್ ಬಿಐ ನಿಗಾ, ಶೀಘ್ರ ಸಮಸ್ಯೆ ಪರಿಹಾರಕ್ಕೆ ಸೂಚನೆ: ನಿರ್ಮಲಾ ಸೀತಾರಾಮನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com