ರಾಮಜನ್ಮಭೂಮಿ: ರಾಮ ಲಲ್ಲಾಗೆ ಗುಂಡುನಿರೋಧಕ, ಇನ್ನಷ್ಟು ಸಮೀಪದಿಂದ ದರ್ಶನ

ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ಗುಂಡು ನಿರೋಧಕ ಆವರಣ ಸೇರಲಿದ್ದಾನೆ! ಹೌದು ಇದೇ ಮಾರ್ಚ್ 25ಕ್ಕೆ ರಾಮ ಲಲ್ಲಾ ವಿಗ್ರಹವನ್ನು ಈಗಿರುವ ತಾತ್ಕಾಲಿಕ ದೇವಾಲಯದ ಸಮೀಪ ಗುಂಡು ನಿರೋಧಕ ಆವರಣದ  ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಕುಮಾರ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ಗುಂಡು ನಿರೋಧಕ ಆವರಣ ಸೇರಲಿದ್ದಾನೆ! ಹೌದು ಇದೇ ಮಾರ್ಚ್ 25ಕ್ಕೆ ರಾಮ ಲಲ್ಲಾ ವಿಗ್ರಹವನ್ನು ಈಗಿರುವ ತಾತ್ಕಾಲಿಕ ದೇವಾಲಯದ ಸಮೀಪ ಗುಂಡು ನಿರೋಧಕ ಆವರಣದ  ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಕುಮಾರ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.

ಇಸ್ಃಟು ಮಾತ್ರವಲ್ಲದೆ ಈ ಮುಂದಿನ ದಿನಗಳಲ್ಲಿ ಭಕ್ತರು ಶ್ರೀರಾಮನನ್ನು ಇನ್ನಷ್ಟು ಸಮೀಪದಿಂದ ದರ್ಶನ ಮಾಡಬಹುದಾಗಿದೆ. ಸಧ್ಯ ರಾಮ ಲಲಾ ವಿಗ್ರಹವನ್ನು ಭಕ್ತರು 52 ಅಡಿ ದೂರದಿಂದಷ್ತೇ ವೀಕ್ಷಿಸಬಹುದು. ಆದರೆ ಈ ಸ್ಥಳಾಂತರ ಪ್ರಕ್ರಿಯೆ ನಡೆದ ನಂತರ ಕೇವಲ 26 ಅಡಿ ದೂರದಿಂದ ರಾಮ್ ಲಲ್ಲಾ ದರ್ಶನ ಪಡೆಯಬಹುದು.

"ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುತ್ತೇವೆ. ಕ್ಸರೆ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲಾಗುವುದು ಅಲ್ಲದೆ ಕ್ಲಾಕ್ ರೂಂ ಸೌಲಭ್ಯಗಳಿರಲಿದೆ. ವೃದ್ಧ ಯಾತ್ರಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಭಕ್ತರಿಂದ ಮೂಲ ಮೂರ್ತಿಯು 52 ರಿಂದ 26 ಅಡಿಗಳಷ್ಟು ಹತ್ತಿರವಾಗಲಿದೆ.ಶ್ರೀರಾಮನು ರಾಮ ಜನ್ಮಭೂಮಿಯಲ್ಲಿ  ಮಾರ್ಚ್ 25 ರಿಂದ ಹೊಸ ಸ್ಥಳದಲ್ಲಿ ದರ್ಶನ ನೀಡಲಿದ್ದಾನೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮ್ ಜನ್ಮಭೂಮಿ ಪ್ರದೇಶದ ಮನಸ್ ದೇವಸ್ಥಾನದ ಬಳಿ ಹೊಸ ರಚನೆಯನ್ನು ನಿರ್ಮಿಸುತ್ತಿದೆ. ಸಂಪೂರ್ಣವಾಗಿ ಗುಂಡು ನಿರೋಧಕ ಗಾಜುಗಳಿಂದ ಕೂಡಿದ ರಚನೆಯನ್ನು ಮೂರ್ತಿಯ ಸುತ್ತಲೂ ರಚಿಸಲಾಗುವುದು"

ಇನ್ನು ರಾಮಮಂದಿರ  'ಭೂಮಿ ಪೂಜೆಗೆ' ದಿನಾಂಕವನ್ನು ಏಪ್ರಿಲ್ 2 ರ ನಂತರ ಪ್ರಕಟಿಸಲಾಗುವುದು ಎಂದು ಶ್ರೀ ರಾಮ್ ಜನಂಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. ರಾಮ ನವಮಿ  ಈ ವರ್ಷ ಏಪ್ರಿಲ್ 2 ರಂದು ಬಂದಿದ್ದು ದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಟ್ರಸ್ಟ್‌ನ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಎಂಜಿನಿಯರ್‌ಗಳೊಂದಿಗೆ ಭಾನುವಾರ ಅಯೋಧ್ಯೆಯಲ್ಲಿ ಪ್ರವಾಸ ಕೈಗೊಂಡಿದ್ದು, ವಿವರಗಳ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ತಿಳಿಸುವ ನಿರೀಕ್ಷೆಯಿದೆ. ಎಂಜಿನಿಯರ್‌ಗಳು ದೇವಾಲಯದ ಸ್ಥಳದಲ್ಲಿ ತಮ್ಮ ಸಂಶೋಧನೆಗಳನ್ನು ಒಳಗೊಂಡ ತಾಂತ್ರಿಕ ವರದಿಯನ್ನು ಮಾರ್ಚ್ 25 ರಂದು ಟ್ರಸ್ಟ್‌ಗೆ ಸಲ್ಲಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com