ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಕೇಂದ್ರ ಕಾರಣ: ಪಿ ಚಿದಂಬರಂ ಕಿಡಿ

ಆರ್ಥಿಕ ಮುಗ್ಗಟ್ಟಿನಲ್ಲಿರುವ ಯೆಸ್ ಬ್ಯಾಂಕ್ ರಕ್ಷಿಸಲು ಎಸ್ಬಿಐ ರೂಪಿಸಿರುವ ಯೋಜನೆಯು ವಿಚಿತ್ರ, ವಿಲಕ್ಷಣವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ದೂರಿದ್ದಾರೆ.
ಮಾಜಿ ವಿತ್ತ ಸಚಿವ ಪಿ ಚಿದಂಬರಂ
ಮಾಜಿ ವಿತ್ತ ಸಚಿವ ಪಿ ಚಿದಂಬರಂ

ನವದೆಹಲಿ: ಆರ್ಥಿಕ ಮುಗ್ಗಟ್ಟಿನಲ್ಲಿರುವ ಯೆಸ್ ಬ್ಯಾಂಕ್ ರಕ್ಷಿಸಲು ಎಸ್ಬಿಐ ರೂಪಿಸಿರುವ ಯೋಜನೆಯು ವಿಚಿತ್ರ, ವಿಲಕ್ಷಣವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ದೂರಿದ್ದಾರೆ.

ಬ್ಯಾಂಕ್‌ ಬಿಕ್ಕಟ್ಟಿನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಮಾರ್ಚ್‌ನಲ್ಲಿ 55,633 ಕೋಟಿ ರೂಪಾಯಿ ಇದ್ದ ಸಾಲದ ಮೊತ್ತ ಏಕಾಏಕಿ 2019ರಲ್ಲಿ 2,41,999 ಕೋಟಿ ರೂಪಾಯಿಗೆ ಏರಿದಾಗಲೂ ಬ್ಯಾಂಕ್‌ನ ಸಾಲದ ಪುಸ್ತಕವನ್ನು ಯಾಕೆ ಅಂಗೀಕರಿಸಿಲ್ಲ. ಬ್ಯಾಂಕ್‌ನ ಮೌಲ್ಯ ಸೊನ್ನೆಯಾಗಿರುವಾಗ ಈ ಹೂಡಿಕೆ ಯೋಜನೆ ವಿಲಕ್ಷಣವಾಗಿ ಕಾಣಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 

ಕಳೆದ 2014ರಿಂದ ಯೆಸ್ ಬ್ಯಾಂಕಿನ ಸಾಲದ ಪ್ರಮಾಣದಲ್ಲಿ ವಾರ್ಷಿಕ ಶೇ.35ರಷ್ಟು ಜಿಗಿತಕ್ಕೆ ಅವಕಾಶ ನೀಡಿದ ವೈಫಲ್ಯಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬ್ಯಾಂಕ್ನ್ನು ಖರೀದಿಸುವ ಎಸ್ಬಿಐ ಯೋಜನೆಯು ವಿಲಕ್ಷಣ, ವಿಚಿತ್ರವಾಗಿದೆ ಸ್ವಯಂ ಇಚ್ಛೆಯಿಂದ ಈ ರಕ್ಷಣಾ ಕ್ರಮಕ್ಕೆ ಮುಂದಾಗಿದೆ ಎಂದೂ ತಮಗೆ ಮನವರಿಕೆಯಾಗಿಲ್ಲ ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಕೇಂದ್ರ ಸರಕಾರವೇ ಕಾರಣ ಎಂದೂ ಚಿದಂಬರಂ ನೇರವಾಗಿಯೇ ಆರೋಪಿಸಿದರು. 

ಮೊದಲ ಬಾರಿಗೆ ತ್ರೈಮಾಸಿಕದಲ್ಲಿ ನಷ್ಟ ದಾಖಲಾದಾಗ ಎಚ್ಚರಿಕೆಯ ಕರೆಗಂಟೆ ಯಾಕೆ ಬಾರಿಸಿಲ್ಲ?” ಎಂದು ಪ್ರಶ್ನಿಸಿರುವ ಚಿದಂಬರಂ. ಬೇಕಾಬಿಟ್ಟಿ ಸಾಲ ನೀಡುತ್ತಿದ್ದ ಯೆಸ್‌ ಬ್ಯಾಂಕ್‌ನದ್ದು ಬ್ಯಾಂಕಿಂಗ್‌ ವ್ಯವಹಾರವಲ್ಲ ಸಮುದ್ರಗಳ್ಳತನ ಎಂದು ಅವರು ಆರೋಪಿಸಿದ್ದಾರೆ. ಸೆನ್ಸೆಕ್ಸ್‌ನಲ್ಲಿ800 ಅಂಕಗಳ ಕುಸಿತವಾಗಿದ್ದನ್ನು ಉಲ್ಲೇಖಿಸಿದ ಅವರು, ಆರ್ಥಿಕತೆಯ ಸೂಕ್ತ ತೀರ್ಪು ಮಾರುಕಟ್ಟೆಯೇ ಹೊರತು ಹಣಕಾಸು ಸಚಿವರಲ್ಲ. ಯೆಸ್ ಬ್ಯಾಂಕ್ ನ ಬಾಕಿ ಇರುವ ಎಲ್ಲಾ ಸಾಲಗಳನ್ನು ವಸೂಲಿ ಮಾಡಲು ಆರ್‌ಬಿಐ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಠೇವಣಿದಾರರ ಹಣ ವಾಪಸ್‌ ಬರುತ್ತದೆ ಎಂಬ ಭರವಸೆ ಮೂಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com