ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣ: ಅಳಿಯನ ಕೊಲೆ ಮಾಡಿಸಿದ್ದ ಉದ್ಯಮಿ ರಾವ್ ಆತ್ಮಹತ್ಯೆಗೆ ಶರಣು

ತನ್ನ ಮಗಳನ್ನು ಮದುವೆ ಆಗಿದ್ದ ದಲಿತ ವ್ಯಕ್ತಿಯನ್ನು ಮರ್ಯಾದಾ ಹತ್ಯೆ ಮಾಡಿಸಿದ್ದ ಆರೋಪ ಹೊತ್ತಿದ್ದ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ಮಾರುತಿ ರಾವ್, ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಇಲ್ಲಿನ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಹತ್ಯೆಯಾದ ಪ್ರಣಯ್ ಪತ್ನಿಯೊಂದಿಗಿರುವ ಚಿತ್ರ (ಸಂಗ್ರಹ ಚಿತ್ರ)
ಹತ್ಯೆಯಾದ ಪ್ರಣಯ್ ಪತ್ನಿಯೊಂದಿಗಿರುವ ಚಿತ್ರ (ಸಂಗ್ರಹ ಚಿತ್ರ)

ಹೈದರಾಬಾದ್: ತನ್ನ ಮಗಳನ್ನು ಮದುವೆ ಆಗಿದ್ದ ದಲಿತ ವ್ಯಕ್ತಿಯನ್ನು ಮರ್ಯಾದಾ ಹತ್ಯೆ ಮಾಡಿಸಿದ್ದ ಆರೋಪ ಹೊತ್ತಿದ್ದ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ಮಾರುತಿ ರಾವ್, ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಇಲ್ಲಿನ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ದಲಿತ ಕ್ರೈಸ್ತ ಯುವಕ ಪ್ರಣಯ್ ಕುಮಾರ್ ಎಂಬಾತ ರಾವ್ ಅವರ ಪುತ್ರಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆದರೆ, ಈ ಮದುವೆಗೆ ರಾವ್ ವಿರೋಧ ವ್ಯಕ್ತಪಡಿಸಿದ್ದರು. 

ಇದರಂತೆ ಬಾಡಿಗೆ ಹಂತಕರಿಗೆ ರೂ.1 ಕೋಟಿ ಸುಪಾರಿ ಕೊಟ್ಟು 2018ರ ಸೆ.14ರಂದು ಅಳಿಯನನ್ನು ಕೊಲೆ ಮಾಡಿಸಿದ್ದ. ಆದರೆ, ಈ ಪ್ರಕರಣದಲ್ಲಿ ಮಗಳೇ ತಂದೆ ವಿರುದ್ಧ ದೂರು ನೀಡಿದ್ದಳು. ಪ್ರಕರಣದಲ್ಲಿ ತಾನು ದೋಷಿ ಆಗುತ್ತೇನೆಂದು ತಿಳಿದ ರಾವ್, ಮಗಳು ಹಾಗೂ ಪತ್ನಿಗೆ ಕ್ಷಮಾಪಣೆ ಪತ್ರ ಬರೆದು ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಾರುತಿ ರಾವ್ ಗುಜರಾತ್ ಮಾಜಿ ಗೃಹ ಸಚಿವ ಹರೆನ್ ಪಾಂಡ್ಯಾ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com