ಮಧ್ಯ ಪ್ರದೇಶ ಆಯ್ತು, ಇದೀಗ ಬಿಜೆಪಿಯ ಮುಂದಿನ ಟಾರ್ಗೆಟ್ ರಾಜಸ್ಥಾನ?

ಜ್ಯೋತಿರಾಧಿತ್ಯ ಸಿಂಧಿಯಾ ಅವರ ರಾಜೀನಾಮೆಯ ನಂತರ, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವು ತನ್ನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇನ್ನು ಕಾಂಗ್ರೆಸ್ ನ 17 ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಅಶೋಕ್-ಸಚಿನ್-ಅಮಿತ್ ಶಾ
ಅಶೋಕ್-ಸಚಿನ್-ಅಮಿತ್ ಶಾ

ನವದೆಹಲಿ: ಜ್ಯೋತಿರಾಧಿತ್ಯ ಸಿಂಧಿಯಾ ಅವರ ರಾಜೀನಾಮೆಯ ನಂತರ, ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವು ತನ್ನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇನ್ನು ಕಾಂಗ್ರೆಸ್ ನ 17 ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. 

ಮಧ್ಯಪ್ರದೇಶ ಆಯ್ತು. ಇನ್ನು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಬಾಂಧವ್ಯ ಅಷ್ಟಕಷ್ಟೆ ಆಗಿರುವುದರಿಂದ ಬಿಜೆಪಿಯ ಮುಂದಿನ ಅಜೆಂಡಾ ರಾಜಸ್ತಾನವಾಗಬಹುದು. 

ಇತ್ತೀಚಿನ ಬೆಳವಣಿಗೆಯಲ್ಲಿ ವಜ್ರ ವ್ಯಾಪಾರಿ ರಾಜೀವ್ ಆರೋರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ಪ್ರಸ್ತಾಪವನ್ನು ಸಿಎಂ ಅಶೋಕ್ ಗೆಹ್ಲೋಟ್ ಮಾಡಿದ್ದರು. ಈ ಕ್ರಮವನ್ನು ಸಚಿನ್ ಪೈಲಟ್ ತೀವ್ರವಾಗಿ ವಿರೋಧಿಸಿದ್ದರು. ಇದು ಬಿಜೆಪಿಗೆ ಅಸ್ತ್ರವಾಗಬಹುದು.

ಉದ್ಯಮಿಯೊಬ್ಬರನ್ನು ರಾಜ್ಯಸಭೆಗೆ ಕಳುಹಿಸುವುದರಿಂದ ತಪ್ಪು ಸಂದೇಶ ಕಳುಹಿಸಿದಂತಾಗುತ್ತದೆ. ಆದ್ದರಿಂದ ಪಕ್ಷದ ನಿಷ್ಠಾವಂತ ಸದಸ್ಯರನ್ನು ಮೇಲ್ಮನೆಗೆ ಕಳುಹಿಸುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಲಹೆ ನೀಡಿದ್ದರು. 

ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾಮೂಹಿಕ ಸಾವು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಪೈಲಟ್ ಕಿಡಿಕಾರಿದ್ದರು. ಇದೇ ಮಾತ್ರವಲ್ಲ. ಇತರ ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. 

ಒಂದು ವೇಳೆ ಬಿಜೆಪಿ ಮಧ್ಯಪ್ರದೇಶದ ಫಾರ್ಮುಲಾವನ್ನೇ ರಾಜಸ್ಥಾನದಲ್ಲೂ ಆಟವಾಡಿದರೆ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com