ಜ್ಯೋತಿರಾದಿತ್ಯ ಸಿಂಧಿಯಾದು ವಂಶವಾಹಿ ರಾಜಕಾರಣವಲ್ಲವೆ?: ಬಿಜೆಪಿಗೆ ಪ್ರಶಾಂತ್ ಕಿಶೋರ್ ಪ್ರಶ್ನೆ

ಕಾಂಗ್ರೆಸ್ ಹಿರಿಯ  ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ  ಎಂಬ ವರದಿಗಳ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ಕಾಂಗ್ರೆಸ್  ಅನ್ನು   ವಂಶವಾಹಿ...
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ: ಕಾಂಗ್ರೆಸ್ ಹಿರಿಯ  ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ  ಎಂಬ ವರದಿಗಳ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ಕಾಂಗ್ರೆಸ್  ಅನ್ನು   ವಂಶವಾಹಿ ರಾಜಕಾರಣದ ಪಕ್ಷ ಎಂದು ಸದಾ ಟೀಕಿಸುವ ಬಿಜೆಪಿ, ಇದೀಗ ರಾಜ ಮನೆತನದ ಹೆಸರನ್ನು ಬಂಡವಾಳಮಾಡಿಕೊಂಡಿರುವ ಸಿಂಧಿಯಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ  ಎಂದು   ಲೇವಡಿ ಮಾಡಿದ್ದಾರೆ.

ಗಾಂಧಿ ಉಪನಾಮ ಹೊಂದಿರುವ ಸೋನಿಯಾ ಗಾಂಧಿ ಕುಟುಂಬವನ್ನು ಆಗಾಗ್ಗೆ ಜರಿಯುವ ಬಿಜೆಪಿ,  "ಸಿಂಧಿಯಾ" ಎಂಬ   ಮನೆತನದ ಹೆಸರಿರುವ ಜ್ಯೋತಿರಾದಿತ್ಯ ಅವರನ್ನು ನಾಯಕ ಎಂದು ಗುರುತಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೀಗೆ  ಕಾಂಗ್ರೆಸ್  ಪಕ್ಷದ್ದು, ವಂಶವಾಹಿ  ರಾಜಕಾರಣ ಎಂಬುದಾದರೆ, ಸಿಂಧಿಯಾ ಅವರದ್ದು  ಏನು ..?  ಎಂದು ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.  ಸಿಂಧಿಯಾ ಅವರ ತಂದೆ ಮಾಧವ್ ರಾವ್ ಸಿಂಧಿಯಾ ಕೂಡ ಕಾಂಗ್ರೆಸ್ ನಲ್ಲಿದ್ದವರು. ಅಲ್ಲದೇ, ಸಿಂಧಿಯಾ ರಾಜ ಮನೆತನ ಶತಮಾನಗಳ ಕಾಲ ಮಧ್ಯಪ್ರದೇಶವನ್ನು ಆಳಿದೆ ಎಂದು ಪ್ರಶಾಂತ್ ಕಿಶೋರ್  ವ್ಯಂಗ್ಯವಾಡಿದ್ದಾರೆ.

ಕೇವಲ ತಮ್ಮ ರಾಜ ಮನೆತನದ ಹೆಸರು ಬಳಸಿಕೊಂಡು ಜ್ಯೋತಿರಾದಿತ್ಯ ಸಿಂಧಿಯಾ ರಾಜಕಾರಣ ಮಾಡಿದ್ದಾರೆ. ಅವರು   ಜನಸಮೂಹವನ್ನು ಸೆಳೆಯ ಬಲ್ಲ, ರಾಜಕಾರಣ ದಿಕ್ಕು ಬದಲಿಸಬಲ್ಲ ಸಮರ್ಥನಾಯಕನಲ್ಲ ಎಂದು ಕಿಶೋರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com