ನಿಮ್ಮ ಮಾತುಗಳು ನನ್ನ ಹೃದಯ ಮುಟ್ಟಿತು: ಜನ್ಮದಿನಕ್ಕೆ ಶುಭಾಶಯ ಕೋರಿದ ಮೋದಿಗೆ ಧನ್ಯವಾದ ಹೇಳಿದ ತರೂರ್

ತಮ್ಮ ಜನ್ಮದಿನಕ್ಕೆ ಶುಭಾಶಯ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಹಗಿರಿಯ ನಾಯಕ ಶಶಿ ತರೂರ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ. ನಿಮ್ಮ ಚಿಂತನಾಶೀಲತೆ ನನ್ನ ಹೃದಯವನ್ನು ಸ್ಪರ್ಧಿಸಿದೆ ಎಂದು ಹೇಳಿದ್ದಾರೆ. 

Published: 10th March 2020 12:36 PM  |   Last Updated: 10th March 2020 12:36 PM   |  A+A-


Shashi Tharoor

ಶಶಿ ತರೂರ್

Posted By : Manjula VN
Source : Online Desk

ನವದೆಹಲಿ: ತಮ್ಮ ಜನ್ಮದಿನಕ್ಕೆ ಶುಭಾಶಯ ಕೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಹಗಿರಿಯ ನಾಯಕ ಶಶಿ ತರೂರ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಅಲ್ಲದೆ. ನಿಮ್ಮ ಚಿಂತನಾಶೀಲತೆ ನನ್ನ ಹೃದಯವನ್ನು ಸ್ಪರ್ಧಿಸಿದೆ ಎಂದು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಶಶಿ ತರೂರ್ ಅವರು, ನರೇಂದ್ರ ಮೋದಿಯವರೇ, ಮಲೆಯಾಳಂನ ಶುದ್ಧ ಸಾಹಿತ್ಯದಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನನಗೆ ಹಾರೈಸಿದ ರೀತಿ ನನ್ನ ಹೃದಯ ಹಾಗೂ ಮನಸ್ಸನ್ನು ಸ್ಪರ್ಶಿಸಿತು ಎಂದು ಹೇಳಿದ್ದಾರೆ. 

ಮಲೆಯಾಳಂನಲ್ಲಿರುವ ಮೋದಿಯವರು ಶುಭಾಶಯವನ್ನು ತರೂರ್ ಅವರೇ ಇಂಗ್ಲೀಷ್ ಭಾಷೆಯಲ್ಲಿ ಅನುವಾದಿಸಿದ್ದು, ನಿಮ್ಮ ಜನ್ಮದಿನಕ್ಕೆ ನನ್ನ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನದಲ್ಲಿ ಸಂತೋಷ, ಸಮೃದ್ಧಿ ತುಂಬಿರಲಿ. ಶಾಂತಿ, ಸಮಾಧಾನ, ಅದೃಷ್ಟಗಳೆಲ್ಲಾ ನಿಮ್ಮದಾಗಲಿ. ನಿಮ್ಮ ಸುದೀರ್ಘ ಕಾಲದ ಸಾರ್ವಜನಿಕ ಜೀವನದ ಅನುಭವ, ಪ್ರತಿಭೆಗಳು ಈ ರಾಷ್ಟ್ರನಿರ್ಮಾಣಕ್ಕೆ ವಿನಿಯೋಗವಾಗಲಿ ಎಂಬುದು ನನ್ನ ಪ್ರಾಮಾಣಿಕ ಹಾರೈಕೆ. ಮೋದಿಯವರಿಂದ ಶಶಿ ತರೂರ್"ಗೆ ಕಳಿಸಲ್ಪಟ್ಟ ಮಳೆಯಾಂ ಸಾಹಿತ್ಯದ ಶುಭಾಶಯಕ್ಕೆ ನೆಟ್ಟಿಗರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp