ಕೇರಳದಲ್ಲೂ ಹೆಚ್ಚಿದ ಕೊರೋನಾ ಭೀತಿ: ಶಬರಿಮಲೆಗೆ ಬರದಂತೆ ಸಲಹೆ, ಶಾಲೆ, ಸಿನಿಮಾ, ದೇಗುಲಕ್ಕೆ ನಿರ್ಬಂಧ

ಒಂದೇ ದಿನ 8 ಕೊರೋನಾ ವೈರಸ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಚ್ಚಿ ಬಿದ್ದಿರುವ ಕೇರಳ ರಾಜ್ಯ ಸರ್ಕಾರ, ಸೋಂಕು ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲು ಆರಂಭಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರ: ಒಂದೇ ದಿನ 8 ಕೊರೋನಾ ವೈರಸ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಚ್ಚಿ ಬಿದ್ದಿರುವ ಕೇರಳ ರಾಜ್ಯ ಸರ್ಕಾರ, ಸೋಂಕು ಹರಡುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲು ಆರಂಭಸಿದೆ. 

ಈ ಕುರಿತು ಹೇಳಿಕೆ ನೀಡಿರುವ ರಾಜ್ಯದ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಅವರು, ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಮಾ.31ರವರೆಗೆ ಎಲ್ಲಾ ಶಾಲೆ, ಕಾಲೇಜು, ಟ್ಯುಟೋರಿಯಲ್ಸ್, ಮದರಸಾ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ 8,9,10 ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರವೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿನ ಎಲ್ಲಾ ಸಿನಿಮಾ ಮಂದಿರಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು. ಎಲ್ಲಾ ರೀತಿಯ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

ಸಚಿವರು ಭಾಗಿಯಾಗಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ, ಜೊತಗೆ ಮಾರ್ಚ್ ನಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೇವಲ ಸಂಪ್ರದಾಯ ಆಚರಣೆಗೆ ಸೀಮಿತಗೊಳಿಸುವಂತೆಯೂ ಎಲ್ಲಾ ಧರ್ಮಗಳ ಧರ್ಮಗುರುಗಳಿಗೆ ಮನವಿ ಮಾಡಲಾಗಿದೆ. ವೈವಾಹಿಕ ಕಾರ್ಯಕ್ರಮಗಳ ವೇಳೆ ನಡೆಸುವ ವಿಧಿ ವಿಧಾನಗಳಿಗೆ ಸರ್ಕಾರ ಅನುಮತಿ ನೀಡಿದೆ. ಆದರೂ, ಇದರಿಂದ ಜನರು ದೂರ ಇರುವುದು ಒಳಿತು ಎಂದು ರಾಜ್.ಯ ಸರ್ಕಾರ ಸೂಚಿಸಿದೆ. ಅಲ್ಲದೆ, ಶಬರಿಮಲೆ ದೇಗುಲಕ್ಕೂ ಭಕ್ತರು ಬರದಿರುವುದು ಒಳಿತು ಎಂದು ಸಲಹೆ ನೀಡಿದೆ.  

ಜೊತೆದೆ ರಾಜ್ಯದಲ್ಲಿ 1116 ಜನರ ಮೇಲೆ ಕಣ್ಗಾವಲು ಇಡಲಾಗಿದೆ. 149 ಶಂಕಿತರನ್ನು ಪ್ರತ್ಯೇಕ ವಾರ್ಡ್ ಗಳಲ್ಲಿ ಇಟ್ಟು ನಿಗಾವಹಿಸಲಾಗಿದೆ. 967 ಜನರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com