ಮಧ್ಯ ಪ್ರದೇಶ ನಂತರ ಜಾರ್ಖಂಡ್ ನಲ್ಲೂ ಆಪರೇಷನ್ ಕಮಲ, ಸೊರೆನ್ ಸೆಳೆಯಲು ಬಿಜೆಪಿ ಯತ್ನ?

ಮಧ್ಯ ಪ್ರದೇಶ ನಂತರ ಈಗ ಜಾರ್ಖಂಡ್ ನಲ್ಲೂ ಆಪರೇಷನ್ ಕಮಲ ನಡೆಸಲು ಮುಂದಾಗಿರುವ ಬಿಜೆಪಿ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ.
ಹೇಮಂತ್ ಸೊರೆನ್
ಹೇಮಂತ್ ಸೊರೆನ್

ರಾಂಚಿ: ಮಧ್ಯ ಪ್ರದೇಶ ನಂತರ ಈಗ ಜಾರ್ಖಂಡ್ ನಲ್ಲೂ ಆಪರೇಷನ್ ಕಮಲ ನಡೆಸಲು ಮುಂದಾಗಿರುವ ಬಿಜೆಪಿ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ.

ಹೇಮಂತ್ ಸೊರೆನ್ ಅವರು ಕಳೆದ ವರ್ಷ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿದ್ದು, ಈಗ ಹೇಮಂತ್ ಸೊರೆನ್ ಅವರನ್ನೇ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ.

ಈಗಾಗಲೇ ಬಾಬುಲಾಲ್ ಮರಾಂಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಿಜೆಪಿ, ಮರಾಂಡಿ ಮೂಲಕ ಹೇಮಂತ್ ಸೊರೆನ್ ಅವರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮರಾಂಡಿ ಆಪ್ತರೊಬ್ಬರು ಐಎಎನ್ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, ಹೇಮಂತ್ ಸೊರೆನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಅವರು ಮೊದಲು ಮರಾಂಡಿ ಅವರನ್ನು ಭೇಟಿ ಮಾಡಿ, ಅವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಸೊರೆನ್ ಅವರು ಮರಾಂಡಿ ಅವರನ್ನು ತಮ್ಮ ತಂದೆ ರೀತಿ ನೋಡುತ್ತಾರೆ. ಸೊರೆನ್ ಅವರು ಬಿಜೆಪಿ ಸೇರಿದರೆ ಯಾರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ.

ಮರಾಂಡಿಯನ್ನು ಕೇಸರಿ ಪಕ್ಷದ ಮಡಿಲಿಗೆ ತರುವುದು ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸುವ ದೊಡ್ಡ ಯೋಜನೆಯ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com