ಚಿಕನ್, ಮಟನ್ ಗಿಂತ ದುಬಾರಿಯಾಯ್ತು ಹಲಸಿನಕಾಯಿ! ಕಾರಣ ಹೀಗಿದೆ ನೋಡಿ

ದೇಶಾದ್ಯಂತ ಈಗ ಕೊರೋನಾವೈರಸ್ ಭಯ ಆವರಿಸಿದೆ. ಇದರಿಂದಾಗಿ ಕೋಳಿ ಮತ್ತು ಮಟನ್ ಮಾರಾಟ ಗಣನೀಯವಾಗಿ ಕುಸಿದಿದೆ.  ಆದರೆ ಇದಕ್ಕೆ ಬದಲಾಗಿ ಈಗ ಮಾರುಕಟ್ತೆಯಲ್ಲಿ ಹಲಸಿನಕಾಯಿ, ಹಣ್ಣಿನ ವ್ಯಾಪಾರ ಭರ್ಜರಿಯಾಗಿದೆ! ಹಲಸಿನ ಕಾಯಿ ಈಗ ಪ್ರತಿ ಕಿಲೋಗ್ರಾಂಗೆ 120 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಈ ಹಲಸಿನ ಬೆಲೆ ಕೆಜಿಗೆ 50 ರು. ಇರುತ್ತದೆ ಆದರೆ ಈಗ ಬೆಲೆಯಲ್ಲಿ ದ
ಹಲಸು
ಹಲಸು

ಲಖನೌ: ದೇಶಾದ್ಯಂತ ಈಗ ಕೊರೋನಾವೈರಸ್ ಭಯ ಆವರಿಸಿದೆ. ಇದರಿಂದಾಗಿ ಕೋಳಿ ಮತ್ತು ಮಟನ್ ಮಾರಾಟ ಗಣನೀಯವಾಗಿ ಕುಸಿದಿದೆ.  ಆದರೆ ಇದಕ್ಕೆ ಬದಲಾಗಿ ಈಗ ಮಾರುಕಟ್ತೆಯಲ್ಲಿ ಹಲಸಿನಕಾಯಿ, ಹಣ್ಣಿನ ವ್ಯಾಪಾರ ಭರ್ಜರಿಯಾಗಿದೆ! ಹಲಸಿನ ಕಾಯಿ ಈಗ ಪ್ರತಿ ಕಿಲೋಗ್ರಾಂಗೆ 120 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಈ ಹಲಸಿನ ಬೆಲೆ ಕೆಜಿಗೆ 50 ರು. ಇರುತ್ತದೆ ಆದರೆ ಈಗ ಬೆಲೆಯಲ್ಲಿ ದುಪ್ಪಟ್ತಾಗಿದ್ದು 120 ರು.ಗೆ ಏರಿಕೆ ಕಂಡಿದೆ.

ವಾಸ್ತವವಾಗಿ, ಹಲಸಿನಕಾಯಿಗೆ ಕೋಳಿಮಾಂಸಕ್ಕಿಂತ ಹೆಚ್ಚಿನ ಬೆಲೆ ಬಂದಿದೆ.  ಆದರೆ ಕೋಳಿ ವ್ಯಾಪಾರಕ್ಕೆ ಬೇಡಿಕೆ ಕೊರತೆಯಾಗಿರುವ ಕಾರಣ ಕೆಜಿಗೆ 80 ರೂ. ನಂತೆ ಮಾರಾಟವಾಗುತ್ತಿದೆ.

"ಮಟನ್ ಬಿರಿಯಾನಿ ಬದಲಿಗೆ ಹಲಸಿನಕಾಯಿ ಬಿರಿಯಾನಿ ತಯಾರಿಸುವುದು ಉತ್ತಮ . ಇದು ರುಚಿಕಟ್ತಾಗಿರುತ್ತದೆ. ಒಂದೇ ಸಮಸ್ಯೆ ಎಂದರೆ ಹಲಸಿನಕಾಯಿ  ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ವಾಗುತ್ತದೆ. " ನಿಯಮಿತವಾಗಿ ಮಾಂಸಾಹಾರ ಸೇವಿಸುವ ಕುಟುಂಬದವರಾದ ಪೂರ್ಣಿಮಾ ಶ್ರೀವಾಸ್ತವ ಹೇಳಿದ್ದಾರೆ.

ಕೊರೋನಾ ಹೆದರಿಕೆ ಕೋಳಿ ವ್ಯಾಪಾರವನ್ನು ತುಂಬಾ ತೀವ್ರವಾಗಿ  ಆಘಾತಗೊಳಿಸಿದೆ. ಪಕ್ಷಿಗಳು ಮಾರಕ ವೈರಸ್‌ನ ವಾಹಕಗಳಾಗಿವೆ ಎಂಬ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪೌಲ್ಟ್ರಿ ಫಾರ್ಮ್ ಅಸೋಸಿಯೇಷನ್ ​​ಇತ್ತೀಚೆಗೆ ಗೋರಖ್‌ಪುರದಲ್ಲಿ ಚಿಕನ್ ಮೇಳವನ್ನು ಆಯೋಜಿಸಿತ್ತು.", ಭಕ್ಷ್ಯಗಳನ್ನು ಸವಿಯಲು ಜನರನ್ನು ಪ್ರೋತ್ಸಾಹಿಸಲು ನಾವು 30 ರೂ.ಗೆ ಪ್ಲೇಟ್ ಫುಲ್ ಚಿಕನ್ ಭಕ್ಷ್ಯಗಳನ್ನು ನೀಡಿದ್ದೇವೆ. ಮೇಳಕ್ಕಾಗಿ ನಾವು ಒಂದು ಸಾವಿರ ಕಿಲೋಗ್ರಾಂಗಳಷ್ಟು ಕೋಳಿ ಬೇಯಿಸಿದ್ದೇವೆ ಮತ್ತು ಇಡೀ ಸ್ಟಾಕ್ ಮಾರಾಟವಾಯಿತು" ಎಂದು ಪೌಲ್ಟ್ರಿ ಫಾರ್ಮ್ ಸಂಘಟನೆಯ ಮುಖ್ಯಸ್ಥ ವಿನೀತ್ ಸಿಂಗ್ ಹೇಳಿದರು .

ಆದಾಗ್ಯೂ, ವೈರಸ್ ಹರಡುವಿಕೆಯ ಮಧ್ಯೆ ಕೋಳಿ, ಮಟನ್ ಅಥವಾ ಮೀನು ಸೇವನೆಯ ಭಯವನ್ನು ಹೋಗಲಾಡಿಸಲು ಮೇಳ ಹೆಚ್ಚು ಯಶಸ್ವಿಯಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com