ಸಿಎಂ ಸ್ಥಾನದ ಬಗ್ಗೆ ಎಂದಿಗೂ ಚಿಂತಿಸಿಲ್ಲ, ರಾಜಕೀಯ ಬದಲಾವಣೆಯಷ್ಟೇ ನನ್ನ ಇಚ್ಛೆಯಾಗಿತ್ತು: ರಜನಿಕಾಂತ್

ರಾಜ್ಯದ ಮುಖ್ಯಮಂತ್ರಿ ಸ್ಥಾನದಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ, ರಾಜಕೀಯ ಬದಲಾಗಬೇಕೆಂಬುದೇ ನನ್ನ ಇಚ್ಛೆ ಎಂದು ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅವರು ಹೇಳಿದ್ದಾರೆ. 
ರಜನೀಕಾಂತ್
ರಜನೀಕಾಂತ್

ಚೆನ್ನೈ: ರಾಜ್ಯದ ಮುಖ್ಯಮಂತ್ರಿ ಸ್ಥಾನದಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ, ರಾಜಕೀಯ ಬದಲಾಗಬೇಕೆಂಬುದೇ ನನ್ನ ಇಚ್ಛೆ ಎಂದು ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅವರು ಹೇಳಿದ್ದಾರೆ. 

ಸುದ್ದಿಗೋಷ್ಠಿ ಮಾತನಾಡಿರುವ ಅವರು, ಈ ಹಿಂದೆ ರಾಜಕೀಯದಲ್ಲಿ ಇಬ್ಬರು ಪ್ರಮುಖರಿದ್ದರು, ಒಬ್ಬರು ಜಯಲಲಿತಾ ಆಗಿದ್ದರೆ, ಮತ್ತೊಬ್ಬರು ಕಲೈಗ್ನಾರ್. ಅಂತರ ಪ್ರಮುಖ ನಾಯಕರಿಗೆ ಜನರು ಮತ ನೀಡುತ್ತಿದ್ದರು. ಆದರೆ, ಇದೀಗ ಅಂತಹ ವಾತಾವರಣವಿಲ್ಲ. ಹೀಗಾಗಿ ಬದಲಾವಣೆ ತರಲು ನಾವು ಹೊಸ ಆಂದೋಲನವನ್ನು ನಡೆಸಬೇಕಿದೆ ಎಂದು ಹೇಳಿದ್ದಾರೆ. 

ನಾನೆಂದಿಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚಿಂತನೆ ನಡೆಸಿಲ್ಲ. ರಾಜಕೀಯ ಬದಲಾವಣೆಯನ್ನಷ್ಟೇ ಬಯಸಿದ್ದೆ. ಇಂದು ರಾಜಕೀಯ ಹಾಗೂ ಸರ್ಕಾರದಲ್ಲಿ ಬದಲಾವಣೆಗಳಾಗದಿದ್ದಲೆ, ಮುಂದೆಂದೂ ಅದು ಸಾಧ್ಯವಾಗುವುದಿಲ್ಲ. ಕೇಂದ್ರದಲ್ಲಿರುವ ಶಕ್ತಿ ಗೊಂದಲ ಸೃಷ್ಟಿಸುತ್ತಿಲ್ಲ. ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕರನ್ನು ಇಷ್ಟಪಟ್ಟು, ಮುಖ್ಯಮಂತ್ರಿಗಳನ್ನು ಪ್ರಶ್ನಿಸಬೇಕು. ಆಡಳಿತಾರೂಢ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳು ವಿಭಿನ್ನವಾಗಿರಬೇಕು. ಆಡಳಿತಾರೂಢ ಪಕ್ಷದ ನಾಯಕರಿಗೆ ಸಿದ್ಧಾಂತಗಳನ್ನು ಬೋಧನೆ ಮಾಡಬೇಕು. ಮುಖ್ಯಮಂತ್ರಿಗಳು ಸಿಇಒ ಆಗಿರಬೇಕು ಎಂದು ತಿಳಿಸಿದ್ದಾರೆ. 

ಪಕ್ಷ ಘೋಷಣೆ ಮಾಡಿದರೂ ಕೂಡ ನಾನು ಆ ಪಕ್ಷದ ನಾಯಕನಾಗಿರುತ್ತೇನೆಯೇ ವಿನಃ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದಿಲ್ಲ. ಸಾಕಷ್ಟು ಜನರು ಸ್ಥಾನ, ಶಕ್ತಿ ಹಾಗೂ ಹಣಕ್ಕಾಗಿ ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ, ನನಗೆ ಅದರಲ್ಲಿ ಆಸಕ್ತಿಯಿಲ್ಲ. ಬದಲಾವಣೆಯಷ್ಟನ್ನೇ ನಾನು ಬಯಸುತ್ತಿದ್ದೇನೆ. ಪಕ್ಷ ಘೋಷಣೆ ಮಾಡುತ್ತಿದ್ದಂತೆಯೇ ಮುಖ್ಯವಾದ ತಂತ್ರಗಳನ್ನು ರೂಪಿಸಲಾಗುತ್ತದೆ. ಚುನಾವಣೆ ಪೂರ್ಣಗೊಂಡ ಬಳಿಕ ಪ್ರಮುಖ ಹುತ್ತೆಗಳಿಗೆ ಕೆಲವರನ್ನಷ್ಟೇ ಪಕ್ಷದಲ್ಲಿ ಉಳಿಸಿಕೊಳ್ಳಲಾಗುತ್ತದೆ. 

ಇದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಎರಡನೆಯದಾಗಿ ಪಕ್ಷಕ್ಕೆ ಯುವ ಜನರನ್ನು ಸೇರ್ಪೆಡೆಗೊಳಿಸಲಾಗುತ್ತದೆ. ತಮ್ಮ ತಮ್ಮ ಕ್ಷೇತ್ರಗಳಿಂದ ಹೊರಬಂದಿರುವವರಿಗೆ ಪಕ್ಷದಲ್ಲಿ ಸದಸ್ಯ ಸ್ಥಾನ ನೀಡಲಾಗುತ್ತದೆ. ಮೂರನೆಯದು ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳು ಬೇರೆಯಾಗಿರುತ್ತದೆ. ಪಕ್ಷದ ನಾಯಕರು ವಿರೋಧ ಪಕ್ಷದ ನಾಯಕರಂತೆ ಇರುತ್ತಾರೆ. ಪಕ್ಷದ ನಾಯಕರೂ ಕೂಡ ಮುಖ್ಯಮಂತ್ರಿಗಳನ್ನು ಪ್ರಶ್ನಿಸುವವರಾಗಿರುತ್ತಾರೆ. 

ಸಭೆ ನಡೆಸಿದಾಗ ನನ್ನ ನಿರ್ಧಾರ ತಿಳಿಸಿದಾಗ ಯಾರೊಬ್ಬರೂ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಬೇಸರ ಕೂಡ ಆಗಿತ್ತು. ಅಭಿಮಾನಿಗಳು ನಾಯಕನ ಮಾತನ್ನು ಕೇಳಬೇಕು. ಅಭಿಮಾನಿಗಳಿಗೆ ಕಿವಿಗೊಡುವ ವ್ಯಕ್ತಿಯಾಗಿರಬಾರದು. ಯುವ ನಾಯಕರಿಗೆ ಅಧಿಕಾರ ನೀಡಲಾಗುತ್ತದೆ. ಜೀವನದಲ್ಲಿ ಸಾಕಷ್ಟು ನೋವು-ನಲಿವುಗಳನ್ನ ನೋಡಿದವರು, ರಾಜಕೀಯಕ್ಕೆ ಸೇರ್ಪಡೆಗೊಳ್ಳಬೇಕೆಂದು ಇಚ್ಛಿಸುವ ನಿವೃತ್ತ ಅಧಿಕಾರಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com