ಬಿಜೆಪಿಗೆ ಸೇರಿದ ಸಿಂಧಿಯಾಗೆ ಎದುರಾಯ್ತು ಹೊಸ ಸಂಕಷ್ಟ!

ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಕಷ್ಟ ಎದುರಾಗಿದೆ. 
ಬಿಜೆಪಿಗೆ ಸೇರಿದ ಸಿಂಧಿಯಾಗೆ ಎದುರಾಯ್ತು ಹೊಸ ಸಂಕಷ್ಟ!
ಬಿಜೆಪಿಗೆ ಸೇರಿದ ಸಿಂಧಿಯಾಗೆ ಎದುರಾಯ್ತು ಹೊಸ ಸಂಕಷ್ಟ!

ಭೋಪಾಲ್:  ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ(ಎಇಡಬ್ಲ್ಯು) ಸಿಂಧಿಯಾ ವಿರುದ್ಧ ದಾಖಲಾಗಿದ್ದ ಹಳೆಯ ಪ್ರಕರಣವೊಂದಕ್ಕೆ ಮರು ಜೀವ ನೀಡಲಾಗಿದೆ. 

ಭೂಮಿ ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ಇದಾಗಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ಕುಟುಂಬದವರ ವಿರುದ್ಧ ಫೋರ್ಜರಿ, ನಕಲಿ ದಾಖಲೆಗಳನ್ನು ನೀಡಿದ ಆರೋಪ ಕೇಳಿಬಂದಿತ್ತು. ಈಗ ಈ ಪ್ರಕರಣಕ್ಕೆ ಮರುಜೀವ ಬಂದಿದೆ.

ಸುರೇಂದ್ರ ಶ್ರೀವಾಸ್ತವ ಅವರು ನೀಡಿದ್ದ ದೂರಿನಲ್ಲಿರುವ ಮಾಹಿತಿಗಳನ್ನು ಮರುಪರಿಶೀಲನೆ ಮಾಡಲು ಆದೇಶ ನೀಡಲಾಗಿದೆ ಎಂದು ಇಒಡಬ್ಲ್ಯು ಹೇಳಿದ್ದಾರೆ. 

ಸುರೇಂದ್ರ ಶ್ರೀವಾಸ್ತವ ಅವರು ಮಾ.12 ರಂದು ಸಿಂಧಿಯಾ ವಿರುದ್ಧ ಹೊಸ ದೂರು ನೀಡಿದ್ದು, ಮಹಲ್ಗೌನ್ ನ ಬಳಿ 6,000 ಚದರ ಅಡಿಗಿಂತಲೂ ಸ್ವಲ್ಪ ಕಡಿಮೆ ಇರುವ ಭೂಮಿಯನ್ನು ತಮಗೆ, 2009 ರಲ್ಲಿದ್ದ ಮೂಲ ಒಪ್ಪಂದಕ್ಕಿಂತ ಭಿನ್ನವಾದ, ನಕಲಿ ದಾಖಲೆ ನೋಂದಾವಣೆ ಡಾಕ್ಯುಮೆಂಟ್ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರ ಮಾ.26 ರಂದು ಕೇಸ್ ದಾಖಲಿಸಲಾಗಿತ್ತು. ಆದರೆ 2018 ರಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು. ಈಗ ಮತ್ತೊಮ್ಮೆ ಪ್ರಕರಣ ದಾಖಲಾಗಿರುವುದರಿಂದ ವಾಸ್ತವಾಂಶಗಳನ್ನು ತಿಳಿಯಲು ಮತ್ತೊಮ್ಮೆ ಪರಿಶೀಲನೆ ನಡೆಸಲು ಆದೇಶಿಸಲಾಗಿದೆ ಎಂದು ಇಒಡಬ್ಲ್ಯೂ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com