ಕೊರೋನಾ ವೈರಸ್ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಭಾರತೀಯರು ಸ್ವದೇಶಕ್ಕೆ ವಾಪಸ್

ಕೊರೋನಾ ವೈರಸ್ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಮಂದಿ ಭಾರತೀಯರನ್ನು ಇಂದು ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. 
ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯರು ಸ್ವದೇಶಕ್ಕೆ ವಾಪಸ್
ಇರಾನ್‌ನಲ್ಲಿ ಸಿಲುಕಿದ್ದ ಭಾರತೀಯರು ಸ್ವದೇಶಕ್ಕೆ ವಾಪಸ್

ನವದೆಹಲಿ: ಕೊರೋನಾ ವೈರಸ್ ಪೀಡಿತ ಇರಾನ್‌ನಲ್ಲಿ ಸಿಲುಕಿದ್ದ 53 ಮಂದಿ ಭಾರತೀಯರನ್ನು ಇಂದು ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. 

ಕಳೆದ ಕೆಲವು ದಿನಗಳಲ್ಲಿ, ಭಾರತ ಸರ್ಕಾರ ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ಮುನ್ನಡೆಸಿದ್ದು, ಇಂದು ಇರಾನ್ ನಲ್ಲಿ ಸಿಲುಕಿದ್ದ ಭಾರತೀಯರ ನಾಲ್ಕನೇ ಬ್ಯಾಚ್ ದೇಶಕ್ಕೆ ವಾಪಸ್ ಆಗಿದ್ದಾರೆ. ಈ 53 ಭಾರತೀಯರಲ್ಲಿ 52 ವಿದ್ಯಾರ್ಥಿಗಳು ಮತ್ತು ಒಬ್ಬರು ಶಿಕ್ಷಕರು ಸೇರಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ.

ಈ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಮುಂಜಾನೆ ಈ ಬಗ್ಗೆ ಟ್ವೀಟ್ ಮಾಡಿದ್ದು, ನಾಲ್ಕನೇ ಬ್ಯಾಚ್ 53 ಭಾರತೀಯರಲ್ಲಿ  52 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ - ಟೆಹ್ರಾನ್ ಮತ್ತು ಶಿರಾಜ್, ಇರಾನ್ ನಿಂದ ಆಗಮಿಸಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಭಾರತಕ್ಕೆ ಮರಳಿದ್ದಾರೆ ಮತ್ತು ಇರಾನಿನ ಅಧಿಕಾರಿಗಳ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. 

ಕಳೆದ ಕೆಲವು ದಿನಗಳಲ್ಲಿ, ಭಾರತವು ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಹಲವಾರು ಕಾರ್ಯಗಳನ್ನು ನಡೆಸಿದೆ. 58 ಪ್ರಜೆಗಳನ್ನು ಒಳಗೊಂಡ ಮೊದಲ ಬ್ಯಾಚ್ ಅನ್ನು ಮಂಗಳವಾರ ಸಿ 17 ಮಿಲಿಟರಿ ಸಾರಿಗೆ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿತ್ತು. ಬಳಿಕ ಶುಕ್ರವಾರ 44 ಜನರನ್ನು ಸ್ಥಳಾಂತರಿಸಲಾಗಿತ್ತು.

ಇನ್ನು ಕೊರೋನಾ ವೈರಸ್ ಪೀಡಿತ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದ್ದು, ಇಲ್ಲಿ ಸುಮಾರು 14 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ 724 ಮಂದಿ ಸಾವಿಗೀಡಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com