ಮಾ.31ರವರೆಗೂ ಸಾಮಾಜಿಕ ಅಂತರ ಕ್ರಮ ಹೇರಲು ಕೇಂದ್ರ ಸರ್ಕಾರ ಪ್ರಸ್ತಾಪ, ಯೂರೋಪ್ ಪ್ರವಾಸಿಗರಿಗೆ ನಿರ್ಬಂಧ

ದೇಶದಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 114ಕ್ಕೆ ಏರಿಕೆ ಆಗಿರುವಂತೆ, ಈ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ವಹಿಸಬೇಕಾದ ಹೊಸ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ಇಂದು ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 114ಕ್ಕೆ ಏರಿಕೆ ಆಗಿರುವಂತೆ, ಈ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ವಹಿಸಬೇಕಾದ ಹೊಸ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ಇಂದು ಪ್ರಕಟಿಸಿದೆ.

ಮಾರ್ಚ್ 31ರವರೆಗೂ ಸಮಾಜದಿಂದ ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಹೇರಲು ಸರ್ಕಾರ ಪ್ರಸ್ತಾಪಿಸಿದೆ. ಅನೀವಾರ್ಯವಲ್ಲದ  ಪ್ರವಾಸವನ್ನು ತಪ್ಪಿಸಬೇಕು, ಬಸ್, ರೈಲು ಮತ್ತು ವಿಮಾನಗಳಂತಹ ಸಾರ್ವಜನಿಕ ಸಾರಿಗೆಯಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುವುದು,  ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಉತ್ತೇಜಿಸಲಾಗುತ್ತಿದೆ.

ಇಂಗ್ಲೆಂಡ್, ಟರ್ಕಿ, ಯೂರೋಪಿಯನ್ ಮುಕ್ತ ವ್ಯಾಪಾರ ಸಂಘ, ಯುರೋಪಿಯನ್ ರಾಷ್ಟ್ರಗಳಿಂದ ಮಾರ್ಚ್ 18ರಿಂದ ಪ್ರಯಾಣಿಕರ ಪ್ರವಾಸವನ್ನು ನಿರ್ಬಂಧಿಸಲಾಗಿದೆ. ಕೋವಿಡ್ -19 ಹರಡುವುದನ್ನು ತಡೆಯಲು ಪ್ರಯಾಣ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಯುಎಇ, ಕತಾರ್, ಒಮನ್ , ಕುವೈತ್ ನಿಂದ ಬರುವ ಪ್ರಯಾಣಿಕರಿಗೆ ಕನಿಷ್ಠ 14 ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com