ನಾಲ್ವರು ಕೊರೋನಾ ವೈರಸ್ ರೋಗಿಗಳ ಪೈಕಿ ಮೂವರನ್ನು ಗುಣಪಡಿಸಿದ ಜೈಪುರ ವೈದ್ಯರು!

ದೇಶದಲ್ಲಿ 110 ಜನರಲ್ಲಿ ಕೊರೋನಾ ಪಾಸಿಟಿವ್  ದೃಢಪಡುವುದರೊಂದಿಗೆ ಈ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಜೈಪುರದಿಂದ ಒಂದು ಒಳ್ಳೆಯ ಸುದ್ದಿ ಹೊರಬಂದಿದೆ.
ಜೈಪುರ ಎಸ್ ಎಂಎಸ್ ಆಸ್ಪತ್ರೆ
ಜೈಪುರ ಎಸ್ ಎಂಎಸ್ ಆಸ್ಪತ್ರೆ

ಜೈಪುರ: ದೇಶದಲ್ಲಿ 110 ಜನರಲ್ಲಿ ಕೊರೋನಾ ಪಾಸಿಟಿವ್  ಪತ್ತೆಯಾಗುವುದರೊಂದಿಗೆ  ಈ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಜೈಪುರದಿಂದ ಒಂದು ಒಳ್ಳೆಯ ಸುದ್ದಿ ಹೊರಬಂದಿದೆ.

ಕೊರೋನಾ ವೈರಸ್ ತಗುಲಿದ ನಾಲ್ವರು ರೋಗಿಗಳ ಪೈಕಿಯಲ್ಲಿ ಮೂವರನ್ನು ಇಲ್ಲಿನ ವೈದ್ಯರು ಗುಣಪಡಿಸಿದ್ದಾರೆ. ಮಲೇರಿಯಾ, ಹಂದಿಜ್ವರ ಮತ್ತು ಎಚ್ ಐವಿ ಪಾಸಿಟಿವ್ ರೋಗಿಗಳಿಗೆ ನೀಡಲಾಗುವ ಔಷಧಿಗಳ ಸಂಯೋಜನೆ ಮೂಲಕ ಕೊರೋನಾ ವೈರಸ್ ಸೋಂಕಿತರನ್ನು ಗುಣಮುಖರನ್ನಾಗಿಸಿದ್ದಾರೆ.

ರಾಜಸ್ಥಾನದ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯ ವೈದ್ಯರ ಈ ಕಾರ್ಯವನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶ್ಲಾಘಿಸಿದ್ದಾರೆ.

ಇಬ್ಬರು ಹಿರಿಯ ನಾಗರಿಕರು ಸೇರಿದಂತೆ ಮೂವರು ಕೊರೋನಾ ಸೋಂಕಿತರ ಪರೀಕ್ಷೆ ವರದಿ ಇದೀಗ ನೆಗಟೀವ್ ಆಗಿದ್ದು, ಎಸ್ ಎಂಎಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ತುಂಬು ಹೃದಯದ ಧನ್ಯವಾದ ಆರ್ಪಿಸುವುದಾಗಿ ಅಶೋಕ್  ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com