ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ತೆಲಂಗಾಣ, ಸಿಎಎ ವಿರುದ್ಧ ನಿರ್ಣಯ ಕೈಗೊಂಡ 7ನೇ ರಾಜ್ಯ

ದೇಶದ ಆರು ಬಿಜೆಪಿಯೇತರ ರಾಜ್ಯಗಳ ಬಳಿಕ ಇದೀಗ ತೆಲಂಗಾಣ ಸರ್ಕಾರ ಸಹ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಿಂತಿದ್ದು, ಸಿಎಎ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ವಿರುದ್ಧ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಕೆಸಿಆರ್
ಕೆಸಿಆರ್

ಹೈದರಾಬಾದ್: ದೇಶದ ಆರು ಬಿಜೆಪಿಯೇತರ ರಾಜ್ಯಗಳ ಬಳಿಕ ಇದೀಗ ತೆಲಂಗಾಣ ಸರ್ಕಾರ ಸಹ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಿಂತಿದ್ದು, ಸಿಎಎ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ವಿರುದ್ಧ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇಂದು ವಿಧಾನಸಭೆಯಲ್ಲಿ ಸಿಎಎ ಹಾಗೂ ಎನ್ ಪಿಆರ್ ವಿರುದ್ಧ ನಿರ್ಣಯ ಮಂಡಿಸಿದರು. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ತಿದ್ದುಪಡಿ ತರಬೇಕು ಮತ್ತು ಯಾವುದೇ ಧರ್ಮ ಅಥವಾ ದೇಶದವರಿಗೆ ಪೌರತ್ವ ನೀಡುವಂತಾಗಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ನಿರ್ಣಯ ಮಂಡಿಸಿ ಮಾತನಾಡಿದ ಕೆ ಚಂದ್ರಶೇಖರ್ ರಾವ್ ಅವರು, ದೇಶಕ್ಕಾಗಿ ಇಂತಹ ಒಡೆದು ಆಳುವ ಮತ್ತು ಸಂಕುಚಿತ ಮನಸ್ಸಿನ ರಾಜಕೀಯದ ಅವಶ್ಯಕತೆ ಇದೆಯೇ?. ವಿದೇಶಿಯರಿಗೆ ಪೌರತ್ವ ನೀಡುವ ಅಗತ್ಯವಿದ್ದರೂ, ಅದನ್ನು ನೀಡುವ ಪ್ರಸ್ತುತ ವಿಧಾನ ಸರಿಯಾಗಿಲ್ಲ ಎಂದು ಹೇಳಿದರು.

ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಬಿಹಾರ ನಂತರ ಸಿಎಎ ಹಾಗೂ ಎನ್ ಪಿಆರ್ ವಿರೋಧಿಸಿದ ಏಳನೇ ರಾಜ್ಯವಾಗಿದೆ. 

ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬೇಡಿ. ಕಾನೂನಿನ ಪ್ರಕಾರ ಪ್ರತಿಯೊಬ್ಬರನ್ನು ಸಮಾನಾಗಿ ನೋಡಬೇಕು. ಹೀಗಾಗಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ತೆಲಂಗಾಣ ಸರ್ಕಾರ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com