ರಾಜ್ಯಸಭೆಯಲ್ಲಿ ಕ್ಯಾನ್ಸರ್ ಗುಣಪಡಿಸಿದ 'ಗೋ ಮೂತ್ರ' ಕಥೆ ಹಂಚಿಕೊಂಡ ಆಸ್ಕರ್ ಫರ್ನಾಂಡಿಸ್ 

ಕಾಂಗ್ರೆಸ್ಸಿನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಗೋಮೂತ್ರದ ಉತ್ತಮ ಗುಣಗಳನ್ನು ಶ್ಲಾಘಿಸಿದ್ದು, ವ್ಯಕ್ತಿಯೊಬ್ಬರು ಗೋಮೂತ್ರ ಕುಡಿಯುವ ಮೂಲಕ ಕ್ಯಾನ್ಸರ್ ಗುಣಪಡಿಸಿಕೊಂಡ ಕಥೆಯನ್ನು ರಾಜ್ಯಸಭೆಯಲ್ಲಿ  ಹೇಳಿಕೊಂಡರು. 

Published: 18th March 2020 07:49 PM  |   Last Updated: 18th March 2020 07:54 PM   |  A+A-


Oscar_fernades_cow1

ಆಸ್ಕರ್ ಫರ್ನಾಂಡೀಸ್

Posted By : Nagaraja AB
Source : The New Indian Express

ನವದೆಹಲಿ: ಕಾಂಗ್ರೆಸ್ಸಿನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಗೋಮೂತ್ರದ ಉತ್ತಮ ಗುಣಗಳನ್ನು ಶ್ಲಾಘಿಸಿದ್ದು, ವ್ಯಕ್ತಿಯೊಬ್ಬರು ಗೋಮೂತ್ರ ಕುಡಿಯುವ ಮೂಲಕ ಕ್ಯಾನ್ಸರ್ ಗುಣಪಡಿಸಿಕೊಂಡ ಕಥೆಯನ್ನು ರಾಜ್ಯಸಭೆಯಲ್ಲಿ  ಹೇಳಿಕೊಂಡರು. 

ಹೋಮಿಯೋಪತಿ ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಗಳಿಗೆ ರಾಷ್ಟ್ರೀಯ ಆಯೋಗಗಳನ್ನು ಸ್ಥಾಪಿಸುವ ಎರಡು ಮಸೂದೆಗಳ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಒಮ್ಮೆ ಮೀರತ್ ಬಳಿಯ ಆಶ್ರಮಕ್ಕೆ ಭೇಟಿ ನೀಡಿದಾಗ ಗೋ ಮೂತ್ರ ಕುಡಿದು ಕ್ಯಾನ್ಸರ್ ಗುಣಪಡಿಸಿಕೊಂಡಿದ್ದಾಗಿ ವ್ಯಕ್ತಿಯೊಬ್ಬರು ತಮ್ಮದೊಂದಿಗೆ ಹೇಳಿಕೊಂಡಿದ್ದಾಗಿ ಫರ್ನಾಂಡೀಸ್ ತಿಳಿಸಿದರು. 

ಇದಕ್ಕೂ ಮುನ್ನ ಅನೇಕ ಬಿಜೆಪಿ ಮುಖಂಡರು ಗೋಮೂತ್ರದ ಶಕ್ತಿಯ ಬಗ್ಗೆ ಮಾತನಾಡಿದ್ದರು. ಇಂತಹ ಹೇಳಿಕೆಗಳಿಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.ಭಾರತೀಯ ವೈದ್ಯಕೀಯ ವ್ಯವಸ್ಥೆ ಉತ್ತಮ ಗುಣಗಳನ್ನು ಶ್ಲಾಘಿಸಿದರು.

ಮೊಣಕಾಲಿನ ತೀವ್ರ ನೋವು ಬಂದಾಗ ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ  ವೈದ್ಯರು ನೀಡಿದ ಸಲಹೆಗಳನ್ನು ನಿರಾಕರಿಸಿ, 'ವಜ್ರಾಸನ' ಮಾಡಲು ಪ್ರಾರಂಭಿಸಿದ್ದೆ. ಯೋಗ ವಜ್ರಾಸನ ಮಾಡಲು ಆರಂಭಿಸಿದ್ದು, ಸದ್ಯ ಯಾವುದೇ ತೊಂದರೆ ಇಲ್ಲದೆ ಕುಸ್ತಿ ಮಾಡುವಷ್ಟು ಸಮರ್ಥನಾಗಿದ್ದೇನೆ ಎಂದರು. 

ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಮೊಣಕಾಸಿನ ಶಸ್ತ್ರಚಿಕಿತ್ಸೆ ತಿಳಿದಿದ್ದರೆ ಅವರ ಬಳಿಗೆ ಹೋಗಿ ವಜ್ರಾಸನ ಆರಂಭಿಸುವಂತೆ ಕೇಳಿಕೊಳ್ಳುತ್ತಿದ್ದೆ. ಇದರಿಂದ ಅವರು ಖಂಡಿತವಾಗಿ ಗುಣಮುಖರಾಗುತ್ತಿದ್ದರು ಎಂದು ಹೇಳಿದರು.

ಅಮೆರಿಕಾದಲ್ಲಿ  ಸುಮಾರು 104 ವರ್ಷ ವಯಸ್ಸಿನ ವ್ಯಕ್ತಿ ಯುವಕರನ್ನು ನಾಚಿಸುವಂತೆ ಓಡುತ್ತಾರೆ. ಯೋಗ ನಮ್ಮ ಸಂಪತ್ತು.  ನೀವು ಯೋಗವನ್ನು ಅಭ್ಯಾಸ ಮಾಡಿದರೆ, ನಮ್ಮ ಆರೋಗ್ಯದ ಬಜೆಟ್ ವೆಚ್ಚವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ಇದು ಜೀವನ ವಿಧಾನ. ಭಾರತೀಯ ಔಷಧ ಪದ್ಧತಿ ವೈದ್ಯರ ಬಳಿಗೆ ಹೋಗುವ ಮೊದಲೇ ಸಾಕಷ್ಟು ಪರಿಹಾರಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.

ಫರ್ನಾಂಡಿಸ್ ಮಸೂದೆಗಳನ್ನು ಬೆಂಬಲಿಸಿದರೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಹೊರಗಿಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.ಮಸೂದೆಯನ್ನು ತಿದ್ದುಪಡಿ ಮಾಡುವಂತೆ ಅಥವಾ ಯೋಗ ಮತ್ತು ಪ್ರಕೃತಿಚಿಕಿತ್ಸೆಯನ್ನು ಒಳಗೊಳ್ಳುವ ಪ್ರತ್ಯೇಕ ಶಾಸನವನ್ನು ತರುವುದಾಗಿ ಭರವಸೆ ನೀಡುವಂತೆ  ಸಚಿವರನ್ನು ಒತ್ತಾಯಿಸುವುದಾಗಿ ಆಸ್ಕರ್ ಫರ್ನಾಂಡೀಸ್ ತಿಳಿಸಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp