ಕೇರಳ: 'ಕೊರೋನಾ ನಿರೋಧಕ ಜ್ಯೂಸ್' ಮಾರುತ್ತಿದ್ದ ವ್ಯಕ್ತಿಯ ಬಂಧನ

ನಿಂಬೆ, ಶುಂಠಿ ಮತ್ತು ಆಮ್ಲಾದಿಂದ ತಯಾರಿಸಿದ ಒಂದು ಕಪ್ ಜ್ಯೂಸ್ COVID-19 ಹರಡುವುದನ್ನು ತಡೆಯಬಹುದೆ? ವಿಜ್ಞಾನ ಇಲ್ಲ ಎಂದು ಹೇಳುತ್ತದೆ.
ಬೋರ್ಡ್
ಬೋರ್ಡ್

ತಿರುವನಂತಪುರಂ: ನಿಂಬೆ, ಶುಂಠಿ ಮತ್ತು ಆಮ್ಲಾದಿಂದ ತಯಾರಿಸಿದ ಒಂದು ಕಪ್ ಜ್ಯೂಸ್ COVID-19 ಹರಡುವುದನ್ನು ತಡೆಯಬಹುದೆ? ವಿಜ್ಞಾನ ಇಲ್ಲ ಎಂದು ಹೇಳುತ್ತದೆ. ಆದರೆ ಈ ಜ್ಯೂಸ್ ಕೊರೋನಾ ವೈರಸ್ ತಡೆಯುತ್ತದೆ ಎಂದು ಜನರನ್ನು ನಂಬಿಸಿ ಅದನ್ನು ಮಾರುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬ ಕೇರಳ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದೀರ್ಘಕಾಲದಿಂದ ಹೆಲಿಪ್ಯಾಡ್ ಬಳಿ ಕೆಫೆಟೇರಿಯಾ ನಡೆಸುತ್ತಿದ್ದ ಈ ವ್ಯಕ್ತಿ, ಇತ್ತೀಚಿಗೆ ಜನರಲ್ಲಿ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಲಾಭ ಪಡೆಯಲು ತನ್ನ ಅಂಗಡಿ ಮುಂದೆ ಆಂಟಿ ಕೊರೋನಾ ಜ್ಯೂಸ್ ಎಂದು ಸಣ್ಣ ಬೋರ್ಡ್ ಹಾಕಿ, ಒಂದು ಕಪ್ ಜ್ಯೂಸ್ ಅನ್ನು 150 ರೂಪಾಯಿಗೆ ಮಾರಾಟ ಮಾಡುತ್ತಿದ್ದನು. ಇದನ್ನು ಗಮನಿಸಿದ ವರ್ಕಲಾ ಪೊಲೀಸರು, ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಬಳಿಕ ಪೊಲೀಸರು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದು, ಬೋರ್ಡ್ ತೆಗೆಯುವಂತೆ ಮತ್ತು ಮತ್ತೆ ಆ ಜ್ಯೂಸ್ ಮಾರದಂತೆ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com