ಕೊರೊನ ವೈರಸ್ ಹರಡುವಿಕೆ ತಡೆಗೆ ಎಲ್ಲ ದಂತ ಚಿಕಿತ್ಸಾಲಯಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ಒತ್ತಾಯ

ಕೊರೊನ ವೈರಸ್ ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ದಂತ ಚಿಕಿತ್ಸಾಲಯಗಳನ್ನು ಮುಚ್ಚುವಂತೆ ಕಾಂಗ್ರೆಸ್ ಸಂವಹನ ಉಸ್ತುವಾರಿ ರಣದೀಪ್ ಸುರ್ಜೇವಾಲ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
ಕೊರೊನ ವೈರಸ್
ಕೊರೊನ ವೈರಸ್

ನವದೆಹಲಿ: ಕೊರೊನ ವೈರಸ್ ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ದಂತ ಚಿಕಿತ್ಸಾಲಯಗಳನ್ನು ಮುಚ್ಚುವಂತೆ ಕಾಂಗ್ರೆಸ್ ಸಂವಹನ ಉಸ್ತುವಾರಿ ರಣದೀಪ್ ಸುರ್ಜೇವಾಲ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ದೇಶದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ದಂತ ಚಿಕಿತ್ಸಾಲಯಗಳಿದ್ದು, ಇವುಗಳಿಂದ ಸೋಂಕು ಹರಡುವಿಕೆ ಹೆಚ್ಚು. ಈ ಹಿನ್ನೆಲೆಯಲ್ಲಿ ತುರ್ತು ಪ್ರಕರಣಗಳನ್ನು ಹೊರತು ಪಡಿಸಿ ಎಲ್ಲ ಚಿಕಿತ್ಸಾಲಯಗಳನ್ನು ಬಂದ್ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಇದುವರೆಗೆ ಸಮುದಾಯಗಳಿಂದ ಕೊರೊನವೈರಸ್ ಉಲ್ಬಣಗೊಂಡ ನಿದರ್ಶನಗಳಿಲ್ಲ. ಸಮುದಾಯಗಳ 100 ಮಾದರಿಗಳ ಪೈಕಿ 500 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ ಸೋಂಕು ಇರುವುದು ದೃಢಪಟ್ಟಿಲ್ಲ.

ಆರೋಗ್ಯ ಇಲಾಖೆ ಮಾಹಿತಿಯಂತೆ ದೇಶದಲ್ಲಿ ಕೊರೊನವೈರಸ್ ಸೋಂಕಿತರ ಸಂಖ್ಯೆ 147ಕ್ಕೇರಿದೆ. ಇವುಗಳಲ್ಲಿ 25 ವಿದೇಶಿ ಪ್ರಜೆಗಳು ಸೇರಿದ್ದಾರೆ. ಸೋಂಕಿನಿಂದ ದೆಹಲಿ, ಮಹಾರಾಷ್ರ ಮತ್ತು ಕರ್ನಾಟಕದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com