ಶುಕ್ರವಾರ ವಿಶ್ವಾಸಮತ ಯಾಚಿಸುವಂತೆ ಕಮಲ್ ನಾಥ್ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ನಾಳೆ ವಿಶ್ವಾಸಮತ ಯಾಚನೆಗೆ ವಿಶೇಷ ವಿಧಾನಸಭಾ ಅಧಿವೇಶನ ಕರೆಯುವಂತೆ ಮಧ್ಯಪ್ರದೇಶ ಸ್ಪೀಕರ್ ಎನ್ ಪಿ ಪ್ರಜಾಪತಿ ಅವರಿಗೆ ನಿರ್ದೇಶಿಸಿರುವ ಸುಪ್ರೀಂಕೋರ್ಟ್, ಸಂಜೆ 5 ಗಂಟೆಯೊಳಗೆ ಇದನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದೆ

Published: 19th March 2020 07:54 PM  |   Last Updated: 19th March 2020 07:54 PM   |  A+A-


CMKamalnath1

ಮುಖ್ಯಮಂತ್ರಿ ಕಮಲ್ ನಾಥ್

Posted By : Nagaraja AB
Source : The New Indian Express

ನವದೆಹಲಿ: ನಾಳೆ ವಿಶ್ವಾಸಮತ ಯಾಚನೆಗೆ ವಿಶೇಷ ವಿಧಾನಸಭಾ ಅಧಿವೇಶನ ಕರೆಯುವಂತೆ ಮಧ್ಯಪ್ರದೇಶ ಸ್ಪೀಕರ್ ಎನ್ ಪಿ ಪ್ರಜಾಪತಿ ಅವರಿಗೆ ನಿರ್ದೇಶಿಸಿರುವ ಸುಪ್ರೀಂಕೋರ್ಟ್, ಸಂಜೆ 5 ಗಂಟೆಯೊಳಗೆ ಇದನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದೆ

ಶಾಸಕರು ಕೈ ಪ್ರದರ್ಶನದ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು, ಅಗತ್ಯವಾದರೆ ವಿಡಿಯೋ ಚಿತ್ರೀಕರಣ ಮಾಡುವಂತೆ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಮತ್ತು ಹೆಮಂತ್ ಗುಪ್ತಾ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ನಿರ್ದೇಶಿಸಿದೆ.

ವಿಶ್ವಾಸಮತ ಯಾಚನೆ ವೇಳೆ ಪಾಲ್ಗೊಳ್ಳಲು 16 ಬಂಡಾಯ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳಲು ಸೂಕ್ತ ಭದ್ರತೆ ಒದಗಿಸಬೇಕೆಂದು ಕರ್ನಾಟಕದ ಡಿಜಿಪಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕಾಂಗ್ರೆಸ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹ್ಹಾಣ್ ಹಾಗೂ ಮುುಕಲ್ ರೊಹ್ಟಗಿ ತಿಳಿಸಿದರು. 

ಕುದುರೆ ವ್ಯಾಪಾರಕ್ಕೆ ಆಹ್ವಾನಿಸಲಾಗುತ್ತಿದ್ದು, ಪ್ರತಿದಿನವೂ ಮಹತ್ವದಾಗಿದ್ದೆ. ಮಧ್ಯಪ್ರದೇಶದಲ್ಲಿನ ಸರ್ಕಾರ ಅಸಂವಿಧಾನಿಕವಾಗಿದೆ. ನ್ಯಾಯಾಲಯದ ಮುಂದೆ ಈ ಪ್ರಕರಣವು ಬಾಕಿ ಇರುವಾಗ ಮುಖ್ಯಮಂತ್ರಿ 3 ಹೊಸ ಜಿಲ್ಲೆಗಳ ಮುಖ್ಯಸ್ಥರನ್ನು ನೇಮಕ ಮಾಡುತ್ತಿದ್ದಾರೆ ತಕ್ಷಣ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಬೇಕು ಎಂದು ರೊಹ್ಟಗಿ ವಾದಿಸಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp