ಕೊರೋನಾ ವೈರಸ್ ಪತ್ತೆ: ಮೊದಲ ಖಾಸಗಿ ಸಂಸ್ಥೆಗೆ ಕೇಂದ್ರ ಸಮ್ಮತಿ

ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಸ್ವಿಜರ್ ಲೆಂಡ್ ಮೂಲದ ಪ್ರಯೋಗಾಲಯವೊಂದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಸೋಂಕು ಪತ್ತೆ ಪರೀಕ್ಷೆಗೆ ಸ್ವಿಜರ್ ಲೆಂಡ್ ಮೂಲದ ಪ್ರಯೋಗಾಲಯವೊಂದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

ಸ್ವಿಜರ್ ಲೆಂಡ್ ಮೂಲದ ರೋಚ್ ಡಯಾಗ್ನಸ್ಟಿಕ್ ಪ್ರಯೋಗಾಲಯಕ್ಕೆ ಸರ್ಕಾರ ಅನುಮತಿ ನೀಡಿದ್ದು, ಆ ಮೂಲಕ ಸೋಂಕು ಪತ್ತೆ ಪರೀಕ್ಷೆಗೆ ಅನುಮತಿ ಪಡೆದ ದೇಶದ ಮೊದಲ ಪ್ರಯೋಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಈ ಅನುಮತಿ ನೀಡಿದ್ದು, ಬೆನ್ನಲ್ಲೇ ಹಲವು ಕಂಪನಿಗಲು ಅರ್ಜಿ ಸಲ್ಲಿಸಿವೆ. ಮಂಗಳವಾರ ಕೇಂದ್ರ ಸರ್ಕಾರ ಖಾಸಗಿ ಲ್ಯಾಬ್ ಗಳಿಗೂ ಸೋಂಕು ಪತ್ತೆ ಪರೀಕ್ಷೆ ನಡೆಸಲು ಅವಕಾಶ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com