ರೈಲ್ವೆ ಇಲಾಖೆ ಕೊಠಡಿಯಲ್ಲಿ ಕೊರೋನಾ ಸೋಂಕಿತನ ವಿಶ್ರಾಂತಿ: ಅಧಿಕಾರಿ ಅಮಾನತು! 

ಜರ್ಮನಿಯಿಂದ ವಾಪಾಸ್ ಆಗಿದ್ದ ತಮ್ಮ ಮಗನನ್ನು ವೈದ್ಯಕೀಯ ತಪಾಸಣೆಗೊಳಪಡಿಸದೇ ರೈಲ್ವೆ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ವಿಶ್ರಾಂತಿ ಮಾಡಲು ಬಿಟ್ಟಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಅಮಾನತು
ಅಮಾನತು

ಬೆಂಗಳೂರು: ಜರ್ಮನಿಯಿಂದ ವಾಪಾಸ್ ಆಗಿದ್ದ ತಮ್ಮ ಮಗನನ್ನು ವೈದ್ಯಕೀಯ ತಪಾಸಣೆಗೊಳಪಡಿಸದೇ ರೈಲ್ವೆ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ವಿಶ್ರಾಂತಿ ಮಾಡಲು ಬಿಟ್ಟಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ರೈಲ್ವೆ ಸರ್ವೆಂಟ್ಸ್ (ಡಿ&ಎ) ನಿಯಮಾವಳಿ-1968 ರ ಪ್ರಕಾರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

ಮಾರ್ಚ್ 13ರಂದು ಮಹಿಳಾ ಅಧಿಕಾರಿಯ ಮಗ ಜರ್ಮನಿಯಿಂದ ಸ್ಪೈನ್ ಮೂಲಕವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದು, ಅಧಿಕಾರಿಗಳ ವಿಶ್ರಾಂತಿ ಗೃಹ (ಒಆರ್ ಹೆಚ್)ದಲ್ಲಿ ತಂಗಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲೇ ಅಧಿಕಾರಿಯ ಮನೆ ಇದೆಯಾದರೂ, ಅಧಿಕಾರಿ ಆತನನ್ನು ಮನೆಗೆ ಕಳುಹಿಸಿಲ್ಲ. ಬದಲಾಗಿ ಜ್ವರ ಮತ್ತು ಇತರ ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಬರೊಬ್ಬರಿ 4 ದಿನಗಳ ಕಾಲ ತಂಗಲು ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ಆತನ ಸ್ಥಿತಿ ಗಂಭೀರವಾದಾಗ ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈ ವೇಳೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ಸ್ಪಷ್ಟವಾಗಿತ್ತು. ಪ್ರಸ್ತುತ ಆತನನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com