ಸೋಂಕಿತ ವ್ಯಕ್ತಿ 10-15 ನಿಮಿಷ ಬಿಸಿಲಿನಲ್ಲಿ ಕುಳಿತರೆ ಸಾಕು, ವೈರಸ್ ತಾನಾಗೇ ಸಾಯುತ್ತದೆ: ಕೇಂದ್ರ ಸಚಿವ

ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಬಿಸಿಲಿನಲ್ಲಿ 10-15 ನಿಮಿಷ ಕುಳಿತರ ಸಾಕು, ವೈರಸ್ ತಾನಾಗಿಯೇ ಸಾಯುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ಅವರು ಹೇಳಿದ್ದಾರೆ. 
ಅಶ್ವಿನಿ ಕುಮಾರ್ ಚೌಬೇ
ಅಶ್ವಿನಿ ಕುಮಾರ್ ಚೌಬೇ

ನವದೆಹಲಿ: ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಬಿಸಿಲಿನಲ್ಲಿ 10-15 ನಿಮಿಷ ಕುಳಿತರ ಸಾಕು, ವೈರಸ್ ತಾನಾಗಿಯೇ ಸಾಯುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ಅವರು ಹೇಳಿದ್ದಾರೆ. 

ದೇಶದಲ್ಲೆಡೆ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೋಂಕು ದೃಢಪಟ್ಟ ವ್ಯಕ್ತಿ ಸೂರ್ಯನ ಕಿರಣ ಬೀಳುವ ಸ್ಥಳದಲ್ಲಿ 10-15 ನಿಮಿಷ ಕುಳಿತರೆ ಸಾಕು, ವ್ಯಕ್ತಿ ಗುಣಮುಖರಾಗುತ್ತಾರೆಂದು ಹೇಳಿದ್ದಾರೆ. 

ವೈರಸ್ ದೃಢಪಟ್ಟಿರುವ ಜನರು 10-15 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಸೂರ್ಯನ ಕಿರಣಗಳಿಂದ ಮನುಷ್ಯನ ದೇಹಕ್ಕೆ ವಿಟಮಿನ್ ಡಿ ಸಿಗಲಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ವೈರಸ್ ಗಳನ್ನು ಸೂರ್ಯನ ಕಿರಣಗಳು ಸಾಯಿಸುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com